ಹಬ್ಬಕ್ಕೆ ಅಥವಾ ಏನಾದರೂ ವಿಶೇಷ ಸಂದರ್ಭದಲ್ಲಿ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ಈ ರುಚಿಕರವಾದ ಹಾಲು ಪಾಯಸ ಮಾಡಿ ಸವಿಯಿರಿ. ಇದು ತುಂಬಾ ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಹಾಲು-4 ಕಪ್, ಅಕ್ಕಿ-2 ಟೇಬಲ್ ಸ್ಪೂನ್, ತುಪ್ಪ-1 ಟೀ ಸ್ಪೂನ್, ಸಕ್ಕರೆ-1/4 ಕಪ್, ಕೇಸರಿದಳ-5 ಎಸಳು, ಏಲಕ್ಕಿ ಪುಡಿ-ಚಿಟಿಕೆ.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಬಾಸುಮತಿ ಅಕ್ಕಿ ಸೇರಿಸಿ ಅದು ಕೆಂಪಗಾಗುವವರೆಗೆ ಹುರಿದುಕೊಂಡು ಒಂದು ಮಿಕ್ಸಿ ಜಾರಿನಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನೀರು ಸೇರಿಸುವುದು ಬೇಡ.
ನಂತರ ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ½ ಟೀ ಸ್ಪೂನ್ ತುಪ್ಪ ಹಾಕಿ ಕುಕ್ಕರ್ ನ ಒಳಭಾಗಕ್ಕೆ ಈ ತುಪ್ಪ ಸವರಿ. ನಂತರ ಇದಕ್ಕೆ ಹಾಲು ಹಾಕಿ ಕುದಿಸಿ. ಇದಕ್ಕೆ ತರಿ ತರಿಯಾಗಿ ರುಬ್ಬಿದ ಅಕ್ಕಿ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ.
ಇದು ಕುದಿಯಲು ಶುರು ಮಾಡಿದಾಗ ಕುಕ್ಕರ್ ಮುಚ್ಚಳ ಮುಚ್ಚಿ. ವಿಷಲ್ ಬರುತ್ತದೆ ಎನ್ನುವಾಗ ಗ್ಯಾಸ್ ಆಫ್ ಮಾಡಿ. ನಂತರ ಮುಚ್ಚಳ ತೆಗೆದು ಹಾಲು ದಪ್ಪಗಾಗುವವರೆಗೆ ಕುದಿಸಿಕೊಳ್ಳಿ. ನಂತರ ಸಕ್ಕರೆ ಸೇರಿಸಿ ಸಕ್ಕರೆ ಕರಗುವವರೆಗೆ ಬೇಯಿಸಿಕೊಳ್ಳಿ. ನಂತರ ಕೇಸರಿ ದಳ, ಏಲ್ಕಕಿ ಪುಡಿ ಸೇರಿಸಿ ಗ್ಯಾಸ್ ಆಫ್ ಮಾಡಿ. ಬಿಸಿ ಇರುವಾಗಲೇ ಸರ್ವ್ ಮಾಡಿ.