alex Certify ಇಲ್ಲಿದೆ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಸರ್ಚ್‌ ಆಗಿರೋ ʼಟಾಪ್ 5ʼ ಫುಡ್‌ ರೆಸಿಪಿಗಳ ಪಟ್ಟಿ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಸರ್ಚ್‌ ಆಗಿರೋ ʼಟಾಪ್ 5ʼ ಫುಡ್‌ ರೆಸಿಪಿಗಳ ಪಟ್ಟಿ !

2023ರಲ್ಲಿ ಸಾಕಷ್ಟು ಭಿನ್ನ ವಿಭಿನ್ನ ಟ್ರೆಂಡ್‌ಗಳನ್ನು ನಾವು ನೋಡಿದ್ದೇವೆ. ಗೂಗಲ್ ಟ್ರೆಂಡ್‌ಗಳ ಪ್ರಕಾರ 2023 ರಲ್ಲಿ ಭಾರತದಲ್ಲಿ ಕೆಲವೊಂದು ಪಾಕ ವಿಧಾನಗಳನ್ನು ಬಳಕೆದಾರರು ಸರ್ಚ್‌ ಮಾಡಿದ್ದಾರೆ. ಅವುಗಳಲ್ಲಿ 5 ಪ್ರಮುಖ ರೆಸಿಪಿಗಳು ಯಾವುವು ಅನ್ನೋದನ್ನು ನೋಡೋಣ.

ಮಾವಿನಕಾಯಿ ಉಪ್ಪಿನಕಾಯಿ: ಭಾರತದಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿರೋ ಮೊದಲ ರೆಸಿಪಿ ಎಂದರೆ ಮಾವಿನಕಾಯಿ ಉಪ್ಪಿನಕಾಯಿ. ರುಚಿಕರವಾದ ಮತ್ತು ಮಸಾಲೆಯುಕ್ತ ಮಾವಿನ ಉಪ್ಪಿನಕಾಯಿಯನ್ನು ಹೇಗೆ ಮಾಡೋದು ಅನ್ನೋದನ್ನು ಅನೇಕ ಬಳಕೆದಾರರು ಸರ್ಚ್‌ ಮಾಡಿದ್ದಾರೆ. ಪ್ರತಿ ಮನೆಯಲ್ಲೂ ವಿಶೇಷ ರೆಸಿಪಿಯೊಂದಿಗೆ ತಯಾರಾಗುವ ಈ ಉಪ್ಪಿನಕಾಯಿ ಎಲ್ಲರ ಬಾಯಲ್ಲೂ ನೀರೂರಿಸುತ್ತದೆ.

ಸೆಕ್ಸ್‌ ಆನ್‌ ದಿ ಬೀಚ್‌ – ಈ ಹೆಸರು ಕೇಳಿ ಗಾಬರಿಯಾಗಬೇಡಿ. ಇದು ಹಣ್ಣಿನಿಂದ ಮಾಡಿರೋ ರಿಫ್ರೆಶಿಂಗ್‌ ಕಾಕ್ಟೈಲ್‌. ಬೇಸಿಗೆಯ ದಿನಗಳಲ್ಲಿ ಈ ತಂಪು ಪಾನೀಯ ಜನರನ್ನು ಆಕರ್ಷಿಸಿದೆ.

ಪಂಚಾಮೃತಹಬ್ಬ ಹರಿದಿನಗಳಲ್ಲಿ ಪಂಚಾಮೃತಕ್ಕೆ ಅಗ್ರಸ್ಥಾನ. ಈ ಪಂಚಾಮೃತ ತಯಾರಿಸುವುದು ಹೇಗೆ ಅನ್ನೋದನ್ನು ಕೂಡ ಅನೇಕರು ಗೂಗಲ್‌ ಸರ್ಚ್‌ ಮಾಡಿದ್ದಾರೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ತುಳಸಿ ಎಲೆಗಳಿಂದ ಮಾಡಿದ ಈ ಪವಿತ್ರ ಪ್ರಸಾದವು ಹಬ್ಬಗಳ ಸಮಯದಲ್ಲಿ ಬಹಳ ಜನಪ್ರಿಯವಾಗಿದೆ.

ಹಸುಸಾಯಿ – ಅತಿ ಹೆಚ್ಚು ಸರ್ಚ್‌ ಮಾಡಿರೋ ರೆಸಿಪಿಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ ಈ ಅಂತರಾಷ್ಟ್ರೀಯ ತಿನಿಸು. ಇದು ಕೊರಿಯನ್ ಶೈಲಿಯಲ್ಲಿ ಮಾಡಿದ ಉಪ್ಪು ಮತ್ತು ಮಸಾಲೆಯುಕ್ತ ಎಲೆಕೋಸಿನ ಭಕ್ಷ್ಯ. ಕೊರಿಯನ್ ಫುಡ್‌ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಇದೇ ಸಾಕ್ಷಿ.

ಧನಿಯಾ ಪಂಜಿರಿಪೌಷ್ಠಿಕ ಮತ್ತು ಟೇಸ್ಟಿ ಪಂಜಿರಿ ಐದನೇ ಸ್ಥಾನದಲ್ಲಿದೆ. ಅದರಲ್ಲೂ ಚಳಿಗಾಲದಲ್ಲಿ ಈ ಆರೋಗ್ಯಕರ ತಿಂಡಿಯನ್ನು ಜನರು ತುಂಬಾ ಇಷ್ಟಪಡುತ್ತಾರೆ. ಈ ಪಂಜಿರಿ ಬಾಣಂತಿಯರಿಗೂ ಪ್ರಯೋಜನಕಾರಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...