alex Certify ‘ಕಾಶಿ – ಗಯಾ ಯಾತ್ರೆ’ ಗೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಶಿ – ಗಯಾ ಯಾತ್ರೆ’ ಗೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

Kashi Yatra & Pitru Rituals - Harivara.com

‘ಕರ್ನಾಟಕ ಭಾರತ್ ಗೌರವ್ ಕಾಶಿ – ಗಯಾ ದರ್ಶನ’ ಯಾತ್ರೆಗೆ ತೆರಳುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಏಳು ದಿನಗಳ ಯಾತ್ರೆಯನ್ನು ಒಂಬತ್ತು ದಿನಗಳಿಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 23ರಂದು ಬೆಂಗಳೂರಿನಿಂದ ಯಾತ್ರೆ ಹೊರಡಲಿದೆ.

ಊಟ, ವಸತಿ, ಮೂರು ಟೈಯರ್ ಎಸಿ ರೈಲು ಪ್ರಯಾಣ ಒಳಗೊಂಡಿರುವ ಈ ಯಾತ್ರೆಯ ವೆಚ್ಚ 22,500 ರೂಪಾಯಿಗಳಾಗಿದ್ದು, ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ 7,500 ರೂಪಾಯಿ ಸಹಾಯಧನ ಸಿಗಲಿದೆ.

ಕಾಶಿ – ಗಯಾ ಯಾತ್ರೆಗೆ ಈಗಾಗಲೇ 640 ಮಂದಿ ನೋಂದಣಿ ಮಾಡಿಕೊಂಡಿದ್ದು, ಇನ್ನೂ 60 ಮಂದಿಗೆ ಅವಕಾಶವಿದೆ. ಮುಂದಿನ ಯಾತ್ರೆ ಅಕ್ಟೋಬರ್ 7ರಂದು ಹೊರಡಲಿದ್ದು, ಇದಕ್ಕೆ ಈಗಾಗಲೇ 209 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 491 ಸೀಟುಗಳು ಬಾಕಿ ಇದ್ದು, ಯಾತ್ರೆಗೆ ತೆರಳಬಯಸುವವರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...