‘ಕರ್ನಾಟಕ ಭಾರತ್ ಗೌರವ್ ಕಾಶಿ – ಗಯಾ ದರ್ಶನ’ ಯಾತ್ರೆಗೆ ತೆರಳುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಏಳು ದಿನಗಳ ಯಾತ್ರೆಯನ್ನು ಒಂಬತ್ತು ದಿನಗಳಿಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 23ರಂದು ಬೆಂಗಳೂರಿನಿಂದ ಯಾತ್ರೆ ಹೊರಡಲಿದೆ.
ಊಟ, ವಸತಿ, ಮೂರು ಟೈಯರ್ ಎಸಿ ರೈಲು ಪ್ರಯಾಣ ಒಳಗೊಂಡಿರುವ ಈ ಯಾತ್ರೆಯ ವೆಚ್ಚ 22,500 ರೂಪಾಯಿಗಳಾಗಿದ್ದು, ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ 7,500 ರೂಪಾಯಿ ಸಹಾಯಧನ ಸಿಗಲಿದೆ.
ಕಾಶಿ – ಗಯಾ ಯಾತ್ರೆಗೆ ಈಗಾಗಲೇ 640 ಮಂದಿ ನೋಂದಣಿ ಮಾಡಿಕೊಂಡಿದ್ದು, ಇನ್ನೂ 60 ಮಂದಿಗೆ ಅವಕಾಶವಿದೆ. ಮುಂದಿನ ಯಾತ್ರೆ ಅಕ್ಟೋಬರ್ 7ರಂದು ಹೊರಡಲಿದ್ದು, ಇದಕ್ಕೆ ಈಗಾಗಲೇ 209 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 491 ಸೀಟುಗಳು ಬಾಕಿ ಇದ್ದು, ಯಾತ್ರೆಗೆ ತೆರಳಬಯಸುವವರು ನೋಂದಣಿ ಮಾಡಿಕೊಳ್ಳಬಹುದಾಗಿದೆ.