alex Certify ಹಿಮ್ಮಡಿ ನೋವಿಗೆ ಇಲ್ಲಿದೆ ಪರಿಣಾಮಕಾರಿ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮ್ಮಡಿ ನೋವಿಗೆ ಇಲ್ಲಿದೆ ಪರಿಣಾಮಕಾರಿ ಮದ್ದು

ಹಿಮ್ಮಡಿ ನೋವು ಹಲವರನ್ನು ಕಾಡುತ್ತದೆ. ಬೆಳಗ್ಗೆ ಹಿಮ್ಮಡಿಗಳಲ್ಲಿ ನೋವು ಬರುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ನೋವು ಬಹಳಷ್ಟು ಹೆಚ್ಚಾಗಿರುತ್ತದೆ. ಮೊಣಕಾಲು ನೋವು ಬೇಗನೆ ವಾಸಿಯಾದರೂ ಹಿಮ್ಮಡಿ, ಮಾಂಸಖಂಡ, ಕೀಲುಗಳಲ್ಲಿ ಊತ ಬಹಳ ಸಮಯದವರೆಗೂ ತೊಂದರೆ ಕೊಡುತ್ತದೆ. ಕೆಲಸ ಮಾಡುವುದು ಹಾಗಿರಲಿ, ಹಿಮ್ಮಡಿ ನೋವು ಜಾಸ್ತಿಯಾದ್ರೆ ನಡೆಯುವುದೇ ಕಷ್ಟ. ಹಾಗಾಗಿ ಹಿಮ್ಮಡಿ ನೋವಿಗೆ ಪ್ರಾರಂಭದಲ್ಲೇ ಕೆಲವೊಂದು ಮನೆಮದ್ದುಗಳನ್ನು ಮಾಡಿಕೊಳ್ಳಿ. ಇದರಿಂದ ಸುಲಭವಾಗಿ ನೋವಿಗೆ ಪರಿಹಾರ ಸಿಗುತ್ತದೆ.

ಹರಳೆಣ್ಣೆ : ಹರಳೆಣ್ಣೆ ಹಾಗೂ ಕಲ್ಲುಪ್ಪು ಉರಿಯೂತವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. ಬಕೆಟ್‌ನಲ್ಲಿ ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಒಂದೆರಡು ಚಮಚ ಹರಳೆಣ್ಣೆ ಮತ್ತು ಕಲ್ಲುಪ್ಪನ್ನು ಬೆರೆಸಿ. ನಂತರ ಪಾದಗಳನ್ನು ನೀರಿನಲ್ಲಿ ಅದ್ದಿಕೊಂಡು ಕುಳಿತುಕೊಳ್ಳಿ. ಹೀಗೆ ಮಾಡುವುದರಿಂದ ಸ್ನಾಯುಗಳು ಮತ್ತು ಕಾಲುಗಳ ಬಿಗಿತ ಕಡಿಮೆಯಾಗಿ, ಹಿಮ್ಮಡಿ ನೋವಿನಿಂದ ಪರಿಹಾರ ಸಿಗುತ್ತದೆ.

ಬಿಸಿ ಎಣ್ಣೆ: ಸ್ನಾಯುಗಳಲ್ಲಿ ರಕ್ತ ಪರಿಚಲನೆ ಸುಧಾರಿಸಲು ನೀವು ಬಿಸಿ ಎಣ್ಣೆಯಿಂದ ಮಸಾಜ್ ಮಾಡಬಹುದು. ಇದು ಮುಚ್ಚಿಹೋಗಿರುವ ರಕ್ತನಾಳಗಳನ್ನು ತೆರೆಯುತ್ತದೆ ಮತ್ತು ಕಣಕಾಲುಗಳನ್ನು ಬಲಪಡಿಸುತ್ತದೆ. ಕಾದ ತೆಂಗಿನ ಎಣ್ಣೆ ಅಥವಾ ತುಪ್ಪದಿಂದ ಮಸಾಜ್ ಮಾಡುವುದರಿಂದ ಸ್ವಲ್ಪ ಸಮಯದಲ್ಲೇ ನೋವು ನಿವಾರಣೆಯಾಗುತ್ತದೆ.

ಅರಿಶಿನ: ಅರಿಶಿನವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡಬಲ್ಲದು. ಸ್ವಲ್ಪ ಕೊಬ್ಬರಿ ಎಣ್ಣೆಗೆ ಅರಿಶಿನ ಸೇರಿಸಿ ಕಾಲುಗಳಿಗೆ ಹಚ್ಚಿ ಮಸಾಜ್‌ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಬೆಲ್ಲವನ್ನೂ ಬೆರೆಸಬಹುದು. ಈ ರೀತಿ ಮಸಾಜ್‌ ಮಾಡುವುದರಿಂದ ಹಿಮ್ಮಡಿ ನೋವು ಕಡಿಮೆಯಾಗುತ್ತದೆ.

ಮಾಯಿಶ್ಚರೈಸರ್‌: ಹಿಮ್ಮಡಿ ಒಡೆದಿದ್ದರೆ, ಶುಷ್ಕವಾಗಿದ್ದರೆ ನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಹಿಮ್ಮಡಿಯನ್ನು ಯಾವಾಗಲೂ ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಹಿಮ್ಮಡಿ ಬಿರುಕು ಬಿಡದಂತೆ ರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

ಬಿಸಿನೀರಿನ ಶಾಖ : ಹಾಟ್‌ ವಾಟರ್‌ ಬ್ಯಾಗ್‌ನಲ್ಲಿ ಬಿಸಿ ನೀರು ತುಂಬಿಸಿಕೊಂಡು ನೋವಿರುವ ಜಾಗದಲ್ಲಿ ಚೆನ್ನಾಗಿ ಶಾಖ ಕೊಡಿ. ಈ ರೀತಿ ಮಾಡುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಉರಿಯೂತ ಮತ್ತು ನೋವು ಸಹ ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...