
ಕೊರೊನಾ ಸಂದರ್ಭದಲ್ಲಿ ಅನೇಕರಿಗೆ ಉಳಿತಾಯದ ಮಹತ್ವ ತಿಳಿದಿದೆ. ಮೊದಲು ಯಾವುದೇ ಪ್ಲಾನ್ ಇಲ್ಲದೆ ಹಣ ಖರ್ಚು ಮಾಡ್ತಿದ್ದವರು ಈಗ ಆಲೋಚಿಸಿ ಖರ್ಚು ಮಾಡ್ತಿದ್ದಾರೆ. ನೀವೂ ಕೆಲ ಸರಳ ಸೂತ್ರವನ್ನು ಅನುಸರಿಸಿಕೊಂಡರೆ, ನಿಮಗೂ ಉಳಿತಾಯ ಕಷ್ಟವಾಗುವುದಿಲ್ಲ.
ಶಾಪಿಂಗ್ ಗೆ ಸಮಯ ನಿಗದಿಪಡಿಸಿ : ಶಾಪಿಂಗ್ ಮಾಲ್ ಅಥವಾ ಚಿಲ್ಲರೆ ಮಳಿಗೆಗಳಿಗೆ ಹೋದಾಗ ನಮ್ಮ ಪ್ಲಾನ್ ಬದಲಾಗುತ್ತದೆ. ಒಂದೆರಡು ವಸ್ತುಗಳನ್ನು ಖರೀದಿಸುವ ಪ್ಲಾನ್ ನಲ್ಲಿ ಮಾಲ್ ಅಥವಾ ಅಂಗಡಿಗೆ ಹೋಗಿರ್ತೇವೆ. ಆದ್ರೆ ಕಂಡಿದ್ದೆಲ್ಲ ಬಾಚಿ, ಬುಟ್ಟಿಗೆ ಹಾಕಿಕೊಂಡು ಬಿಲ್ ಮಾಡಿ ಬರ್ತೆವೆ. ಶಾಪಿಂಗ್ ಮಾಲ್ ಗೆ ಹೋದಾಗ ಸಮಯ ಸರಿದಿದ್ದು ನಮಗೆ ತಿಳಿಯುವುದಿಲ್ಲ. ಮೊದಲು ಒಂದು ಸಮಯ ನಿಗದಿಪಡಿಸಿಕೊಂಡು ಮಾಲ್ ಒಳಗೆ ಹೋಗಿ.
ಹವ್ಯಾಸದ ಶಾಪಿಂಗ್ : ಅನೇಕರು ಅಗತ್ಯ ವಸ್ತುಗಳ ಖರೀದಿಗೆ ಶಾಪಿಂಗ್ ಮಾಡುವುದಿಲ್ಲ. ಮೂಡ್ ಬದಲಿಸಿಕೊಳ್ಳಲು, ಸಮಯ ಕಳೆಯಲು ಶಾಪಿಂಗ್ ಮಾಡುವವರಿದ್ದಾರೆ. ಮೊದಲು ನಿಮಗೆ ಇದು ಅಗತ್ಯವಿದೆಯಾ ಎಂಬುದನ್ನು ಪ್ರಶ್ನಿಸಿಕೊಳ್ಳಿ. ಆಗ, ಅನಾವಶ್ಯಕ ಶಾಪಿಂಗ್ ಗೆ ನೀವು ಎಷ್ಟು ಸಮಯ ಹಾಳು ಮಾಡಿದ್ದೀರಿ ಹಾಗೂ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಖರ್ಚಾಗದೆ ಉಳಿದಿದೆ ಎಂಬುದು ನಿಮಗೆ ಗೊತ್ತಾಗುತ್ತದೆ. ಇದು ನಿಮ್ಮನ್ನು ಆಶ್ಚರ್ಯಗೊಳಿಸುವುದ್ರಲ್ಲಿ ಸಂಶಯವಿಲ್ಲ.
ಸೆಕೆಂಡ್ ಹ್ಯಾಂಡ್ ಶಾಪಿಂಗ್ : ಸೆಕೆಂಡ್ ಹ್ಯಾಂಡ್ ಶಾಪಿಂಗ್ ನಿಂದ ಹಣದ ಜೊತೆ ಪರಿಸರ ರಕ್ಷಣೆಯಾಗುತ್ತದೆ. ಆನ್ಲೈನ್ ನಲ್ಲಿ ಸೆಕೆಂಡ್ ಹ್ಯಾಂಡ್ ಪ್ಲಾಟ್ಫಾರ್ಮ್ ಬಳಸಿ. ಅದ್ರಲ್ಲಿ ಅನೇಕ ವಸ್ತುಗಳನ್ನು ನೀವು ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಅಲ್ಲಿ ಚೌಕಾಸಿಗೆ ಅವಕಾಶವಿರುತ್ತದೆ.
ಬಜೆಟ್ ಅಪ್ಲಿಕೇಶನ್ಗಳು : ಸಂಬಳ ಸಿಕ್ಕ ತಕ್ಷಣ ಪಾರ್ಟಿಗೆ, ಶಾಪಿಂಗ್ಗೆ, ಹೋಟೆಲ್ಗೆ ಹೀಗೆ ನಾನಾ ಕಾರಣಕ್ಕೆ ಹಣ ಖರ್ಚು ಮಾಡಿಬಿಡುತ್ತೇವೆ. ತಿಂಗಳ ಕೊನೆಯಲ್ಲಿ ಯಾವುದಕ್ಕೆ ಎಷ್ಟು ಹಣ ವ್ಯಯಿಸಿದ್ದೇವೆ ಎಂದು ಲೆಕ್ಕ ಸಿಗೋದಿಲ್ಲ. ಇದಕ್ಕಾಗಿ ನೀವು ಈಗಾಗಲೇ ಇಂಟರ್ನೆಟ್ನಲ್ಲಿ ಲಭ್ಯವಿರುವ ಬಜೆಟ್ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ; ಇದರಲ್ಲಿ ನೀವು ಯಾವುದಕ್ಕೆ ಎಷ್ಟು ಖರ್ಚು ಮಾಡುತ್ತೀರಿ ಅನ್ನೋದನ್ನು ಬರೆದಿಟ್ಟುಕೊಳ್ಳಬಹುದು. ಈ ಮೂಲಕ ನಿಮ್ಮ ಹಣ ಎಲ್ಲಿ ಹೆಚ್ಚು ಪೋಲಾಗುತ್ತಿದೆ ಎಂಬ ಲೆಕ್ಕ ನಿಮಗೆ ಸಿಗಲಿದೆ.
ಫ್ರೀ ಲ್ಯಾನ್ಸಿಂಗ್ ಕೆಲಸಗಳು : ಕೋವಿಡ್ 19 ಬಂದ ಬಳಿಕ ಫ್ರೀಲ್ಯಾನ್ಸಿಂಗ್ ಕೆಲಸಗಳಿಗೆ ಹೆಚ್ಚು ಬೇಡಿಕೆಯಿದೆ. ಇದರಲ್ಲಿ ನೀವು ಒಂದೇ ಕಂಪನಿಯಲ್ಲಿ ಉರು ಹೊಡೆಯಬೇಕು ಎಂದೇನಿಲ್ಲ. ನಿಮ್ಮ ಶಕ್ತಿಗೆ ಅನುಸಾರವಾಗಿ ನೀವು ಕೆಲಸ ಮಾಡಬಹುದು. ಅಲ್ಲದೇ ಹಣ ಉಳಿತಾಯ ಮಾಡಲು ಇದೇ ಬೆಸ್ಟ್ ಮಾರ್ಗ ಎಂದೂ ತಜ್ಞರು ಹೇಳ್ತಾರೆ. ಆದರೆ ಫ್ರೀಲ್ಯಾನ್ಸ್ ಕೆಲಸಗಳ ದೊಡ್ಡ ಸಮಸ್ಯೆ ಅಂದರೆ ವೇತನ ಪಾವತಿ. ಸರಿಯಾದ ಸಮಯಕ್ಕೆ ನಿಮಗೆ ವೇತನ ಸಿಗುವಂತ ಕಡೆ ಕೆಲಸ ಮಾಡಿ. ಇದರಲ್ಲಿ ಮನೆಯಲ್ಲಿ ಸುಮ್ಮನೇ ಕಾಲ ಹರಣ ಮಾಡುವ ಬದಲು ಮನೆಯಲ್ಲೇ ಕೂತು ದುಡಿಮೆ ಮಾಡಬಹುದಾಗಿದೆ.
ಕ್ಯಾಶ್ ಬ್ಯಾಕ್ ಶಾಪಿಂಗ್ ಪೋರ್ಟಲ್: ತಜ್ಞರ ಪ್ರಕಾರ, ಕ್ಯಾಶ್ ಬ್ಯಾಕ್ ಶಾಪಿಂಗ್ ಪೋರ್ಟಲ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಅನೇಕ ಪೋರ್ಟಲ್ ಗಳು ಶೇಕಡಾ 1ರಿಂದ 30ರಷ್ಟು ಕ್ಯಾಶ್ ಬ್ಯಾಕ್ ನೀಡುತ್ತವೆ. ಅದನ್ನು ನೀವು ಮತ್ತೊಂದು ಖರೀದಿಗೆ ಬಳಸಬಹುದಾಗಿದೆ. ಇದ್ರಿಂದ ವಸ್ತುವಿಗೆ ಪೂರ್ಣ ಹಣ ನೀಡುವ ಅವಶ್ಯಕತೆಯಿರುವುದಿಲ್ಲ.

ಸ್ವಯಂ ಚಾಲಿತ ಪಾವತಿ : ನಿಮ್ಮ ಹೂಡಿಕೆ ಕೂಡ ಸೆಲ್ ಫೋನ್ ಬಿಲ್, ವಿದ್ಯುತ್ ಬಿಲ್ ಪಾವತಿಯಷ್ಟೆ ಮುಖ್ಯವಾಗಿರುತ್ತದೆ. ಹಾಗಾಗಿ ಹೂಡಿಕೆ ಖಾತೆಗೆ ಸ್ವಯಂ ಚಾಲಿತವಾಗಿ ನಿಮ್ಮ ಹಣ ಪಾವತಿಯಾಗುವ ವ್ಯವಸ್ಥೆ ಮಾಡಿಕೊಳ್ಳಿ. ಇದರಿಂದ ಮರೆಯುವ ಸಮಸ್ಯೆ ಎದುರಾಗುವುದಿಲ್ಲ.
ಸ್ವಿಚ್ ಸೆಲ್ಫೋನ್ ಕರಿಯರ್
ಈ ಒಂದು ಆಯ್ಕೆಯ ಮೂಲಕ ನೀವು ತಿಂಗಳು ಭರಿಸುವ ಮೂಲಕ ಬಿಲ್ ಮೊತ್ತದಲ್ಲಿ ಕಡಿತ ಮಾಡಿಕೊಳ್ಳಬಹುದಾಗಿದೆ. ಆದರೆ ಇದಕ್ಕಾಗಿ ನೀವು ಸ್ವಲ್ಪ ಓಡಾಟ ಮಾಡಬೇಕಾಗಿ ಬರಬಹುದು. ಆದರೆ ಸ್ವಿಚ್ ಸೆಲ್ ಫೋನ್ ಕರಿಯರ್ನ ಸಹಾಯದಿಂದ ನೀವು ಕಡಿಮೆ ಬೆಲೆಯಲ್ಲಿ ನಿಮಗೆ ಬೇಕಾದ ಸಿಮ್ ಪ್ಲಾನ್ ಹೊಂದಬಹುದಾಗಿದೆ.

ಬೆಲೆ-ಬಳಕೆ : ವಸ್ತುಗಳನ್ನು ಖರೀದಿ ಮಾಡುವಾಗ ಅದರ ಬೆಲೆ ಜೊತೆ ಅದು ಎಷ್ಟು ಬಾರಿ ಬಳಕೆಯಾಗ್ತಿದೆ ಎಂಬುದನ್ನು ನೋಡಬೇಕಾಗುತ್ತದೆ. ಸಾಮಾನ್ಯವಾಗಿ ದೊಡ್ಡ ರಿಯಾಯಿತಿ ಹಾಗೂ ಬ್ರಾಂಡ್ ನೋಡಿ ನಾವು ವಸ್ತುಗಳನ್ನು ಖರೀದಿ ಮಾಡುತ್ತೇವೆ.
ಆದ್ರೆ ಅದನ್ನು ಅತಿ ಕಡಿಮೆ ಬಾರಿ ಬಳಸುತ್ತೇವೆ. ನಾವು ಖರ್ಚು ಮಾಡಿದ ಹಣ ನಮಗೆ ಅದ್ರ ಬಳಕೆಯಿಂದ ಬಂದಿರುವುದಿಲ್ಲ. ಕೆಲ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿದ್ರೂ ಹೆಚ್ಚು ಬಾರಿ ಬಳಸಿರುತ್ತೇವೆ. ಅದ್ರ ಹಣ ನಮಗೆ ಬಳಕೆಯಲ್ಲಿ ಬಂದಿರುತ್ತದೆ. ಹಾಗಾಗಿ ಬಳಸುವ ಮೊದಲು, ಬೆಲೆ ಹಾಗೂ ಬಳಕೆ ಎರಡನ್ನೂ ನೋಡಬೇಕಾಗುತ್ತದೆ.
ಹೆಚ್ಚಿನ ಅಡುಗೆ : ಅಡುಗೆ ಮಾಡುವ ವೇಳೆ ದೀರ್ಘಕಾಲ ಇರಬಲ್ಲ ಆಹಾರವನ್ನು ಹೆಚ್ಚಾಗಿ ತಯಾರಿಸಿ. ಅದನ್ನು ಫ್ರಿಜರ್ ಮಾಡಬಹುದು. ನಿಮಗೆ ಸುಸ್ತಾದ ಸಂದರ್ಭದಲ್ಲಿ ಹೊರಗಿನ ತಿಂಡಿಗೆ ಹೆಚ್ಚಿನ ಹಣ ಖರ್ಚು ಮಾಡುವ ಬದಲು ಮಾಡಿಟ್ಟಿರುವ ಆಹಾರ ಸೇವನೆ ಮಾಡಬಹುದು.
ಆಹಾರದ ಪಟ್ಟಿ: ಪಟ್ಟಿಯ ಪ್ರಕಾರ ಆಹಾರ ವಸ್ತುಗಳ ಖರೀದಿ ಮಾಡಿ. ಒಂದು ವಾರಕ್ಕೆ ಆಗುವಷ್ಟನ್ನು ಮಾತ್ರ ಖರೀದಿ ಮಾಡಿ. ಆಹಾರವನ್ನು ಸರಿಯಾಗಿ ರಕ್ಷಿಸಿ. ಆಲೂಗಡ್ಡೆ, ಈರುಳ್ಳಿಯನ್ನು ಬೇರ್ಪಡಿಸಿಡುವುದು ಹಾಗೂ ಸೊಪ್ಪುಗಳನ್ನು ನೀರಿನಲ್ಲಿ ಇಡುವುದು ಕೂಡ ಹಣ ಉಳಿಸಿದಂತೆ ಎಂಬುದು ನಿಮಗೆ ತಿಳಿದಿರಲಿ. ಮಿತಿ ಮೀರಿ ಆಹಾರ ಸರ್ವ್ ಮಾಡಬೇಡಿ. ಸಣ್ಣ ಪ್ಲೇಟ್ ಬಳಸುವುದು ಒಳ್ಳೆ ಉಪಾಯ.

ಸಂಬಳ ನಿಮ್ಮ ಕೈ ಸೇರುವ ಮುನ್ನವೇ ಹಣವನ್ನು ಹೀಗೆ ವಿಂಗಡಿಸಿ : ಒಮ್ಮೆ ಖಾತೆಗೆ ಹಣ ಬಂದು ಸೇರಿತು ಅಂದಕೂಡಲೇ ಅದನ್ನು ಉಳಿತಾಯ ಮಾಡೋದು ಅಷ್ಟೊಂದು ಸುಲಭವಲ್ಲ. ಹೀಗಾಗಿ ನೀವು ಕಚೇರಿಯಲ್ಲಿ ನಿಮ್ಮ ಹೆಚ್ಆರ್ ಬಳಿಯಲ್ಲಿ ಪೂರ್ತಿ ವೇತನವನ್ನು ಖಾತೆಗೆ ಹಾಕುವ ಬದಲು ಉಳಿತಾಯ ಖಾತೆಗೆ ಮರುನಿರ್ದೇಶಿಸಬಹುದೇ ಎಂದು ವಿಚಾರಿಸಿ. ನಿಮ್ಮ ಖಾತೆಗೆ ಹಣ ಬೀಳುವ ಮೊದಲೇ ಉಳಿತಾಯ ಮಾಡಬೇಕೆಂದುಕೊಂಡ ಮೊತ್ತವು ಸುರಕ್ಷಿತ ಜಾಗದಲ್ಲಿ ಇರುವುದರಿಂದ ನಿಮಗೆ ಅಂತ್ಯದಲ್ಲಿ ಲಾಭವಿದೆ.
ಚಿಲ್ಲರೆ ಸಂಗ್ರಹ : ಅನೇಕ ವಸ್ತುಗಳ ಖರೀದಿ ನಂತ್ರ ನಿಮಗೆ ಚಿಲ್ಲರೆ ಸಿಗುತ್ತದೆ. ಆ ಚಿಲ್ಲರೆಯನ್ನು ತಂದು ಒಂದು ಕಡೆ ಸಂಗ್ರಹಿಸಿ. ಸಣ್ಣ ಸಣ್ಣ ಉಳಿತಾಯ ಕೊನೆಯಲ್ಲಿ ನೆರವಿಗೆ ಬರುತ್ತದೆ. ಕೇವಲ ಆರು ತಿಂಗಳು ಬಳಸಿದ ಕಾರನ್ನು ಖರೀದಿ ಮಾಡಿದ್ರೂ ನೀವು ಸಾಕಷ್ಟು ಹಣ ಉಳಿಸಿದಂತೆ.
ಅಗತ್ಯ ವಸ್ತುಗಳ ಪಟ್ಟಿ ಮಾಡಿ : ವಿಶೇಷ ದಿನಗಳಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿ ಮಾಡಲು ಆದ್ಯತೆ ನೀಡಿ. ಸಾಮಾನ್ಯವಾಗಿ ದೊಡ್ಡ ರಿಯಾಯಿತಿ ಹಾಗೂ ಜಾಹಿರಾತು ನಿಮ್ಮನ್ನು ಆಕರ್ಷಿಸುತ್ತದೆ. ದೊಡ್ಡ ವಸ್ತುಗಳನ್ನು ಖರೀದಿ ಮಾಡುವ ಮೊದಲು, ಬ್ರ್ಯಾಂಡ್, ಬೆಲೆ, ರಿಯಾಯಿತಿ ಎಲ್ಲವನ್ನೂ ತಿಳಿದು ಖರೀದಿಗೆ ಮುಂದಾಗಿ.
ಅನ್‌ಸಬ್‌ಸ್ಕ್ರೈಬ್ : ಸಾಮಾನ್ಯವಾಗಿ ಚಿಲ್ಲರೆ ವ್ಯಾಪಾರಿಗಳು ನಿಮ್ಮ ಇ-ಮೇಲ್ ಅಡ್ರೆಸ್ ಪಡೆಯುತ್ತಾರೆ. ಅದಕ್ಕೆ ರಿಯಾಯಿತಿ, ಆಕರ್ಷಕ ಕೊಡುಗೆ ಜಾಹಿರಾತು ಕಳುಹಿಸುತ್ತಾರೆ. ನೀವು ಅದನ್ನು ನೋಡಿ ಅನೇಕ ಬಾರಿ ಅವಶ್ಯವಿಲ್ಲದ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಆದ್ರೆ ಇಂತಹ ಮೇಲ್ ಅನ್‌ಸಬ್‌ಸ್ಕ್ರೈಬ್ ಮಾಡಿ ನೋಡಿ. ಅದ್ರಿಂದ ನಿಮ್ಮ ಎಷ್ಟು ಹಣ ಉಳಿಯುತ್ತದೆ ಎಂಬುದು ನಿಮಗೆ ಗೊತ್ತಾಗುತ್ತದೆ.

ಹೊಟೇಲ್ ನಲ್ಲಿ ತಿಂದ್ರೆ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿಯೇ ಆಹಾರ ತಯಾರಿಸುವ ಪ್ಲಾನ್ ಮಾಡಿ. ರಾತ್ರಿ,ಮರುದಿನ ಮಾಡುವ ಅಡುಗೆ ಪ್ಲಾನ್ ಮಾಡಿ. ತಿಂಗಳ ಕೊನೆಯಲ್ಲಿ ನಿಮಗೆ ತಿಳಿಯದೆ ಸಾಕಷ್ಟು ಹಣ ಉಳಿದಿರುತ್ತದೆ.
ಅನಾವಶ್ಯಕ ಹಣ ಪೋಲಾಗುವುದನ್ನು ತಪ್ಪಿಸಿ: ಯಾವುದೇ ಶಾಪಿಂಗ್ ಮಾಡುವ ಮುನ್ನ ನಿಮಗೆ ನೀವು ಪ್ರಾಮಾಣಿಕರಾಗಿ ಇರುವುದರಿಂದ ನೀವು ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ.
ಯಾವುದೇ ಹಣವನ್ನು ವ್ಯಯಿಸುವ ಮುನ್ನ ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಬೇಕು. ಈ ಹಣವನ್ನು ನಾವು ಇದಕ್ಕಿಂತಲೂ ಒಳ್ಳೆಯ ಕೆಲಸಕ್ಕೆ ವಿನಿಯೋಗಿಸಬಹುದೇ..? ಹಣ ಖರ್ಚು ಮಾಡುವ ಮುನ್ನ ನಿಖರವಾದ ನಿರ್ಧಾರ ಕೈಗೊಳ್ಳಿ. ಇದೇ ಪ್ರಶ್ನೆಯನ್ನು ನಿಮಗೆ ನೀವು ಪ್ರತಿ ಬಾರಿ ಕೇಳಿ ಕೊಳ್ಳುವುದರಿಂದ ಹಣ ಉಳಿತಾಯ ಮಾಡಬಹುದಾಗಿದೆ. ಬೇಕಾದಲ್ಲಿ ನೀವೇ ಒಮ್ಮೆ ಟ್ರೈ ಮಾಡಿ ನೋಡಿ.