ಕೆಲವೊಮ್ಮೆ ಉಷ್ಣತೆಯಿಂದ ಕಣ್ಣು ಉರಿ ಶುರುವಾಗುತ್ತದೆ. ಅಥವಾ ದಿನನಿತ್ಯ ಹೆಚ್ಚಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿ, ಮೊಬೈಲ್ ನೋಡುವ ಅಭ್ಯಾಸದಿಂದಲೂ ಕಣ್ಣು ಉರಿ ಬರಬಹುದು.
ಕಣ್ಣಿನ ಉರಿ ಸಮಸ್ಯೆಯಿಂದ ಹೊರಬರಲು ಈ ಮನೆ ಮದ್ದುಗಳನ್ನು ಉಪಯೋಗಿಸಿ.
* ಕೊತ್ತಂಬರಿ ಬೀಜದಿಂದ ಕಷಾಯ ಮಾಡಿ. ಅದರಲ್ಲಿ ಹತ್ತಿಯನ್ನು ನೆನೆಸಿ, ಆ ಹತ್ತಿಯನ್ನು ಕಣ್ಣುಗಳ ಮೇಲೆ ಇಟ್ಟರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
* ಗರಿಕೆಯನ್ನು ಪೇಸ್ಟ್ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆ ಮೇಲೆ ಲೇಪ ಮಾಡಿ 1 ಗಂಟೆ ಬಿಟ್ಟು ತೊಳೆದರೆ ಕಣ್ಣು ಉರಿ ನಿವಾರಣೆಯಾಗುತ್ತದೆ.
* ನುಗ್ಗೆ ಸೊಪ್ಪನ್ನು ಅರೆದು ಸೋಸಿ ಆ ರಸವನ್ನು ಕಣ್ಣಿನ ರೆಪ್ಪೆ ಮೇಲೆ ಹಚ್ಚಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
* ಬೆಟ್ಟದ ನೆಲ್ಲಿಕಾಯಿ ಪುಡಿಗೆ ತುಪ್ಪ ಮತ್ತು ಬೆಚ್ಚಗಿನ ನೀರು ಸೇರಿಸಿ ಪ್ರತಿದಿನ ರಾತ್ರಿ ಕುಡಿದರೆ ಕಣ್ಣುಗಳ ಉರಿ ಶಮನವಾಗುತ್ತದೆ.
* ನಿಯಮಿತವಾಗಿ ಸೊಗದೆ ಬೇರಿನ ಶರಬತ್ತನ್ನು ಸೇವಿಸಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
* ಹೆಸರು ಕಾಳಿನ ಪುಡಿಯನ್ನು ನೀರಲ್ಲಿ ಕಲಸಿ ಮುಖ ಮತ್ತು ರೆಪ್ಪೆಗೆ ಲೇಪ ಮಾಡಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
* ಕಣ್ಣು ಉರಿ ಇದ್ದಾಗ ಬಸಳೆ ಸೊಪ್ಪಿನ ರಸಕ್ಕೆ ಬೆಣ್ಣೆ ಹಾಕಿ ಕಲಸಿ ಅದನ್ನು ಹತ್ತಿಯಲ್ಲಿ ಅದ್ದಿ ಕಣ್ಣುಗಳ ಮೇಲೆ ಇಡಬೇಕು.
* ಸೀಬೆ ಮರದ ಹೂಗಳನ್ನು ದಾಳಿಂಬೆ ಚಿಗುರಿನ ಜೊತೆ ಕಷಾಯ ಮಾಡಿ ಆ ಕಷಾಯದಿಂದ ಕಣ್ಣುಗಳನ್ನು ತೊಳೆದರೆ ಕಣ್ಣುಗಳ ಉರಿ ನಿವಾರಣೆಯಾಗುತ್ತದೆ.
* ಶ್ರೀಗಂಧವನ್ನು ರೋಸ್‌ವಾಟರ್‌ನಲ್ಲಿ ಕಲಸಿ ರೆಪ್ಪೆಗಳ ಮೇಲೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.