ಅಂಡರ್ ಆರ್ಮ್ಸ್ ನಲ್ಲಿರುವ ಕೂದಲು ತೆಗೆದ ನಂತ್ರ ಅಲ್ಲಿ ಕಪ್ಪಾಗುತ್ತದೆ. ಕ್ರೀಮ್ ಬಳಸಿದ ನಂತ್ರವೂ ಈ ಭಾಗದಲ್ಲಿ ಕಪ್ಪು ಕಲೆ ಸಮಸ್ಯೆ ಕಾಡುತ್ತದೆ. ಕೆಲ ಮನೆ ಮದ್ದಿನ ಮೂಲಕ ಅಂಡರ್ ಆರ್ಮ್ಸ್ ಬೆಳ್ಳಗೆ ಮಾಡಬಹುದು.
ಸೌತೆಕಾಯಿ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಪ್ರಯೋಜನಕಾರಿ. ಅಂಡರ್ ಆರ್ಮ್ ಗಳ ಕಪ್ಪನ್ನು ತೆಗೆದುಹಾಕಲು ಸೌತೆಕಾಯಿ ಬಳಸಬಹುದು. ಇದು ನೈಸರ್ಗಿಕ ಬ್ಲೀಚಿಂಗ್ ಕೆಲಸ ಮಾಡುತ್ತದೆ. ಸೌತೆಕಾಯಿ ಸಿಪ್ಪೆ ತೆಗೆದು ಅದನ್ನು ರುಬ್ಬಿಕೊಳ್ಳಿ. ನಂತ್ರ ಫಿಲ್ಟರ್ ಮಾಡಿ. ಹತ್ತಿಯಲ್ಲಿ ರಸವನ್ನು ಅದ್ದಿ ಕಪ್ಪು ಕಲೆಯಿರುವ ಜಾಗಕ್ಕೆ ಹಚ್ಚಿ. ಪ್ರತಿದಿನ ಹೀಗೆ ಮಾಡಿದಲ್ಲಿ ಕಪ್ಪಿನ ಸಮಸ್ಯೆ ಕಡಿಮೆಯಾಗುತ್ತದೆ.
ಆಲೂಗಡ್ಡೆ ಕಪ್ಪು ಚರ್ಮವನ್ನು ಬೆಳ್ಳಗೆ ಮಾಡುತ್ತದೆ. ಆಲೂಗಡ್ಡೆಯನ್ನು ತೆಳ್ಳಗೆ ಕತ್ತರಿಸಿ ಅದನ್ನು ಅಡರ್ ಆರ್ಮ್ ಗೆ ರಬ್ ಮಾಡಿ. ಆಲೂಗಡ್ಡೆ ರಸ ತೆಗೆದು ಅದನ್ನೂ ಅಂಡರ್ ಆರ್ಮ್ಸ್ ಗೆ ಹಚ್ಚಬಹುದು. ಅದು ಒಣಗಿದ ನಂತ್ರ ಸ್ವಚ್ಛಗೊಳಿಸಿ.
ನಿಂಬೆ ಹಣ್ಣನ್ನು ಡಾರ್ಕ್ ಅಂಡರ್ ಆರ್ಮ್ಸ್ ಜಾಗಕ್ಕೆ ಹಚ್ಚಿ ಮಸಾಜ್ ಮಾಡಬಹುದು. ಇದು ಕೂಡ ಕಪ್ಪಾಗಿರುವ ಅಂಡರ್ ಆರ್ಮ್ಸನ್ನು ಸುಂದರಗೊಳಿಸುತ್ತದೆ.