ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಮಸ್ಯೆ. ಕೆಲವೇ ಕೆಲವು ಮಂದಿ ಮಾತ್ರ ಮಲಬದ್ಧತೆ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗ್ತಾರೆ. ಬಹುತೇಕರು ಇದನ್ನು ನಿರ್ಲಕ್ಷಿಸಿದ್ರೆ ಮತ್ತೆ ಕೆಲವರು ಮನೆಯಲ್ಲೇ ಔಷಧಿ ಮಾಡಿಕೊಳ್ಳುವ ಪ್ರಯತ್ನ ಮಾಡ್ತಾರೆ. ಮಲಬದ್ಧತೆಗೆ ಮನೆಯಲ್ಲಿಯೇ ಸಾಕಷ್ಟು ಮದ್ದಿದೆ.
ನೆಲ್ಲಿಕಾಯಿ ಮಲಬದ್ಧತೆಗೆ ಒಳ್ಳೆಯ ಔಷಧಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮೊದಲು ತ್ರಿಪಲಾ ಚೂರ್ಣವನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವಿಸಬಹುದು. ಗಮನಿಸಬೇಕಾದ ಒಂದು ವಿಷಯವೆಂದರೆ ಒಣಗಿದ ಅಥವಾ ಮಾಗಿದ ಅಂಜೂರದ ಹಣ್ಣುಗಳು ನಾರಿನಿಂದ ತುಂಬಿರುತ್ತವೆ.
ಮಲಬದ್ಧತೆಯನ್ನು ನಿವಾರಿಸಲು ಕೆಲವು ಅಂಜೂರದ ಹಣ್ಣುಗಳನ್ನು ಒಂದು ಲೋಟ ಹಾಲಿನಲ್ಲಿ ಕುದಿಸಿ, ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಕುಡಿಯಿರಿ. ಮಿಶ್ರಣದ ಹಾಲು ತಣ್ಣಗಾಗುವ ಮೊದಲು ಕುಡಿಯಬೇಕು.
ಒಣ ದ್ರಾಕ್ಷಿ ಫೈಬರ್ ನಿಂದ ತುಂಬಿರುತ್ತದೆ. ಒಣ ದ್ರಾಕ್ಷಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ರಾತ್ರಿಯಿಡಿ ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದರ ನೀರು ಕುಡಿದ್ರೆ ಮಲ ಬದ್ಧತೆ ಕಡಿಮೆಯಾಗುತ್ತದೆ.