ತಲೆ ನೋವು, ಒತ್ತಡ, ಕೊಬ್ಬು ಇದು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಬಹುತೇಕ ಎಲ್ಲರೂ ಈ ಸಮಸ್ಯೆಯಿಂದ ಬಳಲ್ತಾರೆ.
ವೆರೈಟಿ ಆಹಾರ ನೋಡಿದಾಗ ಡಯಟ್ ದಾರಿ ತಪ್ಪುತ್ತದೆ. ಮನಸ್ಸಿಗೆ ಬಂದಷ್ಟು ರುಚಿ ರುಚಿ ಆಹಾರ ಬಾಯಿಗೆ ಹಿತವೆನಿಸುತ್ತದೆ. ನಂತ್ರ ಕಾಡುವ ಎಸಿಡಿಟಿ ಮಾತ್ರ ಯಾರಿಗೂ ಬೇಡ.
ನೀವಂದುಕೊಂಡಂತೆ ಎಸಿಡಿಟಿ ದೊಡ್ಡ ಖಾಯಿಲೆಯಲ್ಲ. ಮನೆಯಲ್ಲಿರುವ ಪದಾರ್ಥಗಳು ಎಸಿಡಿಟಿಯನ್ನು ಕಡಿಮೆ ಮಾಡುತ್ತವೆ.
ಓಂ ಕಾಳು (ಅಜವಾಯಿನ್) ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ಎಸಿಡಿಟಿ ಕಾಡುತ್ತಿದ್ದರೆ ಓಂ ಕಾಳನ್ನು ಜಗಿಯಿರಿ. ಎರಡು ಗಂಟೆಗೊಮ್ಮೆ ಓಂ ಕಾಳನ್ನು ಜಗಿಯಿರಿ. ಇಲ್ಲವಾದ್ರೆ ಓಂ ಕಾಳನ್ನು ನೀರಿಗೆ ಹಾಕಿ ನೀರಿನ ಪ್ರಮಾಣ ಅರ್ಧವಾಗುವವರೆಗೆ ಕುದಿಸಿ. ಆ ನೀರನ್ನು ಕುಡಿಯುವುದ್ರಿಂದಲೂ ಎಸಿಡಿಟಿ ಕಡಿಮೆಯಾಗುತ್ತದೆ.
ನೆಲ್ಲಿ ಕಾಯಿ ಹೆಸರು ಹೇಳಿದ್ರೆ ಬಹುತೇಕರ ಬಾಯಲ್ಲಿ ನೀರು ಬರುತ್ತದೆ. ನೆಲ್ಲಿಕಾಯಿ ತಿನ್ನಲು ರುಚಿ. ಎಸಿಡಿಟಿಗೂ ಇದು ಒಳ್ಳೆ ಮದ್ದು. ಮಾರುಕಟ್ಟೆಯಿಂದ ನೆಲ್ಲಿಕಾಯಿ ತಂದು ಅದನ್ನು ಕತ್ತರಿಸಿ ಒಣಗಿಸಿ ಸದಾ ನಿಮ್ಮ ಬಳಿ ಇಟ್ಟುಕೊಳ್ಳಬಹುದು.
ಮಸಾಲೆ ರುಚಿಯನ್ನು ಕಾಳು ಮೆಣಸು ಹೆಚ್ಚಿಸುತ್ತದೆ. ಇದು ಔಷಧಿಯೂ ಹೌದು. ಎಸಿಡಿಟಿ ಸಮಸ್ಯೆ ಕಾಡಿದ್ರೆ ಕಾಳು ಮೆಣಸಿನ ಪುಡಿಯನ್ನು ಮಜ್ಜಿಗೆಗೆ ಹಾಕಿ ಕುಡಿಯಿರಿ. ದಿನದಲ್ಲಿ ಎರಡು ಬಾರಿ ಕಾಳುಮೆಣಸಿನ ಮಜ್ಜಿಗೆ ಕುಡಿದ್ರೆ ಸಮಸ್ಯೆ ಕಡಿಮೆಯಾಗುತ್ತದೆ.
ಪದೇ ಪದೇ ಎಸಿಡಿಟಿ ನಿಮ್ಮನ್ನು ಕಾಡ್ತಿದ್ದರೆ ತುಳಸಿ ಬೆಸ್ಟ್. ತುಳಸಿ ಎಲೆಗಳನ್ನು ಆಗಾಗ ಜಗಿಯುತ್ತಿರಿ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಎಸಿಡಿಟಿ ಸಮಸ್ಯೆ ದೂರ ಮಾಡುತ್ತದೆ.
ಕಾಳು ಮೆಣಸಿನ ಜೊತೆ ಜೀರಿಗೆ ತಿಂದ್ರೂ ಎಸಿಡಿಟಿ ಕಡಿಮೆಯಾಗುತ್ತದೆ. ಜೀರಿಗೆ ಹೊಟ್ಟೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಜೀರಿಗೆ ಕಷಾಯ ಕುಡಿಯಬಹುದು.