ಆರೋಗ್ಯಕರ ಓಟ್ಸ್ ನಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಓಟ್ಸ್ ಕೇವಲ ಡಯಟ್ ಗಷ್ಟೇ ಸೀಮಿತವಲ್ಲ. ಅದನ್ನು ಬಳಸಿ ಸಿಹಿ ಸಿಹಿಯಾದ ಓಟ್ಸ್ ಲಡ್ಡು ಕೂಡ ತಯಾರು ಮಾಡಬಹುದು. ಇಲ್ಲಿದೆ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಓಟ್ಸ್ – 1 1/2 ಕಪ್
ಸಕ್ಕರೆ – 1 ಕಪ್
ಗೋಡಂಬಿ – 20 ಸಣ್ಣಗೆ ಹೆಚ್ಚಿದ್ದು
ಏಲಕ್ಕಿ ಪುಡಿ – 1/2 ಚಮಚ
ತುಪ್ಪ – 1/2 ಕಪ್
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಓಟ್ಸ್ ಅನ್ನು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಹುರಿದು ಕೊಳ್ಳಬೇಕು. ಅದು ಆರಿದ ನಂತರ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿಯಬೇಕು. ನಂತರ ಸಕ್ಕರೆಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ಒಂದು ಬೌಲ್ ನಲ್ಲಿ ಸಕ್ಕರೆ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.
ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ ಗೋಡಂಬಿಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಇದನ್ನು ತಯಾರಿಸಿಕೊಂಡ ಹಿಟ್ಟಿಗೆ ಸೇರಿಸಿ ಕೊಳ್ಳಬೇಕು. ನಂತರ ಏಲಕ್ಕಿ ಪುಡಿಯನ್ನು ಸೇರಿಸಿ. ಎಲ್ಲಾ ಪದಾರ್ಥಗಳು ಒಂದಾಗುವ ರೀತಿಯಲ್ಲಿ ಮಿಶ್ರಣ ಮಾಡಿ. ತುಪ್ಪದ ಬಿಸಿಗೆ ಹಿಟ್ಟು ಉಂಡೆ ಕಟ್ಟುವ ಹದಕ್ಕೆ ಬಂದಿರುತ್ತದೆ. ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಉಂಡೆಗಳನ್ನು ಕಟ್ಟಿ. ಈಗ ರುಚಿಯಾದ ಆರೋಗ್ಯಕರವಾದ ಓಟ್ಸ್ ಲಡ್ಡು ತಯಾರಿಸಿ ಸವಿಯಿರಿ.