ಮ್ಯಾಚಿಂಗ್ ಉಡುಪಿಗೆ ಬೇಕಾಗಿ ನಿನ್ನೆ ಬಳಸಿದ ನೇಲ್ ಪಾಲಿಶ್ ತೆಗೆಯಬೇಕಾಗಿದೆಯೇ. ನಿಮ್ಮ ಮನೆಯಲ್ಲಿ ರಿಮೂವರ್ ಇಲ್ಲವೇ. ಅದಿಲ್ಲದೆಯೂ ನಿಮ್ಮ ಉಗುರಿಗೆ ಹಾನಿಯಾಗದಂತೆ ಹೇಗೆ ಬಣ್ಣವನ್ನು ತೆಗೆದುಹಾಕಬಹುದು ಎಂಬುದು ನಿಮಗೆ ಗೊತ್ತೇ?
ನಿಮ್ಮಲ್ಲಿರುವ ಡಿಯೋಡರೆಂಟ್ ಅನ್ನು ಎರಡು ಬಾರಿ ಉಗುರಿನ ಮೇಲೆ ಸಿಂಪಡಿಸಿ. ಕಾಟನ್ ಬಟ್ಟೆಯ ನೆರವಿನಿಂದ ನಿಮ್ಮ ಬೆರಳನ್ನು ಉಜ್ಜಿ. ಇದು ಸ್ವಚ್ಛವಾಗಲು ಹೆಚ್ಚು ಸಮಯ ತೆಗೆದುಕೊಂಡರೂ, ಉಗುರಿಗೆ ಯಾವುದೇ ಹಾನಿ ಮಾಡುವುದಿಲ್ಲ.
ಪೇಸ್ಟ್ ಅನ್ನು ಬೆರಳಿನ ಮೇಲೆ ಹಚ್ಚಿ ಬ್ರಶ್ ನಿಂದ ಸರಿಯಾಗಿ ತಿಕ್ಕುವುದರಿಂದ ಉಗುರಿನ ಮೇಲಿನ ಬಣ್ಣ ಇಲ್ಲವಾಗುತ್ತದೆ. ನಿಮ್ಮ ಕೈಯ ಮೇಲಿರುವ ಬಣ್ಣಕ್ಕೆ ಇನ್ನೊಂದು ಲೈಟ್ ಕಲರ್ ನೈಲ್ ಪಾಲಿಶ್ ಹಚ್ಚಿ. ತಕ್ಷಣ ಕಾಟನ್ ಹತ್ತಿಯಿಂದ ಒತ್ತಿ ತೆಗೆದರೆ ಹೊಸ ಹಾಗೂ ಹಳೆಯ ಬಣ್ಣಗಳೆರಡೂ ಎದ್ದು ಬರುತ್ತವೆ. ಇದನ್ನು ಒಂದೊಂದೇ ಬೆರಳಿಗೆ ಅಪ್ಲೈ ಮಾಡಿಕೊಂಡು ಬರುವುದು ಒಳ್ಳೆಯದು.
ಹ್ಯಾಂಡ್ ಸ್ಯಾನಿಟೈಸರ್ ಅಥವಾ ಹೇರ್ ಸ್ಪ್ರೇಯಿಂದಲೂ ಇದನ್ನು ಪ್ರಯತ್ನಿಸಬಹುದು. ಆದರೆ ಇದಕ್ಕೆ ಹೆಚ್ಚು ಹೊತ್ತು ಬೇಕು ಅಷ್ಟೇ.
ಬ್ಲೇಡ್ ಅಥವಾ ಚೂರಿಯ ಸಹಾಯದಿಂದ ನೇಲ್ ಪಾಲಿಶ್ ತೆಗೆಯುವುದರಿಂದ ಉಗುರಿಗೆ ಹೆಚ್ಚಿನ ಹಾನಿಯಾಗಬಹುದು. ಇದನ್ನು ತಪ್ಪಿಸಲು ಮೇಲಿನ ವಿಧಾನಗಳನ್ನೇ ಅನುಸರಿಸಿ.