ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಮೊಸರು ತುಂಬಾ ಹುಳಿಯಾಗಿದ್ದರೆ ಅದನ್ನು ಸೇವಿಸಲು ಆಗುವುದಿಲ್ಲ. ಹಾಗಾಗಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಈ ಸಲಹೆಯನ್ನು ಪಾಲಿಸಿ.
*ಮೊಸರನ್ನು ಸರಿಯಾದ ಪಾತ್ರೆಯಲ್ಲಿ ಸಂಗ್ರಹಿಸಿ : ಮೊಸರನ್ನು ಮಣ್ಣಿನ ಪಾತ್ರೆಯಲ್ಲಿ ಇಡಿ. ಇದು ತಂಪಾಗಿರುವುದರಿಂದ ಬೇಗ ಹುಳಿಯಾಗುವುದಿಲ್ಲ. ಹಾಲಿಗೆ ಹೆಪ್ಪು ಹಾಕುವಾಗ ½ ಚಮಚ ಮೊಸರನ್ನು ಹಾಕಿದರೆ ಸಾಕು.
*ಮೊಸರನ್ನು ಸರಿಯಾದ ಸಮಯದಲ್ಲಿ ತಯಾರಿಸಿ: ಮೊಸರು ತಯಾರಿಸಲು ಉತ್ತಮ ಸಮಯವೆಂದರೆ ಸಂಜೆ 6ಗಂಟೆಗೆ ಮೊಸರು ತಯಾರಿಸುವ ಪ್ರಕ್ರಿಯೆ ಶುರು ಮಾಡಿ. ಇದರಿಂದ ಮೊಸರು ಹುಳಿಯಾಗುವುದಿಲ್ಲ.
*ಮನೆಯಲ್ಲಿಯೇ ಮೊಸರು ಮಾಡುವುದಾದರೆ ಹಾಲು ಬಿಸಿಯಿರುವಾಗ ಅದಕ್ಕೆ ಹೆಪ್ಪು ಹಾಕಬೇಡಿ. ಹಾಲು ಸಂಪೂರ್ಣವಾಗಿ ತಣ್ಣಗಾದ ಮೇಲೆ ಸ್ವಲ್ಪ ಹೆಪ್ಪು ಹಾಕಿ. ಎಷ್ಟು ಬೇಕೊ ಅಷ್ಟನ್ನು ಮಾತ್ರ ತಯಾರಿಸಿ. ಉಳಿದರೆ ಫ್ರಿಜ್ ನಲ್ಲಿಟ್ಟು ಸೇವಿಸುವ ಅರ್ಧ ಗಂಟೆ ಮೊದಲು ಫ್ರಿಜ್ ನಿಂದ ತೆಗೆದು ಬಳಸಿ.