ಈಗ ಎಲ್ಲದಕ್ಕೂ ಬೆಲೆ ಏರಿಕೆ. ಅದೂ ಅಲ್ಲದೇ ಕೆಮಿಕಲ್ ಇಲ್ಲದೇ ಯಾವುದನ್ನೂ ಕೂಡ ಬೆಳೆಸುವುದಿಲ್ಲ. ಹಾಗಾಗಿ ಕೆಲವೊಂದು ತರಕಾರಿಗಳನ್ನು ಮನೆಯಲ್ಲಿಯೇ ನಾವೇ ಬೆಳೆದರೆ ಹಣವೂ ಉಳಿತಾಯವಾಗುತ್ತದೆ. ಆರೋಗ್ಯಕ್ಕೂ ಒಳ್ಳೆಯದು.
ಮನೆಯ ಹಿತ್ತಲಿನಲ್ಲಿ, ಟೆರೇಸ್ ನಲ್ಲಿ ಸುಲಭವಾಗಿ ಟೊಮೆಟೊ ಗಿಡವನ್ನು ಬೆಳೆಸುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.
ಒಳ್ಳೆಯ ತಳಿಯ ಟೊಮೆಟೊ ಬೀಜವನ್ನು ಆರಿಸಿ. ನಂತರ ಒಂದು ಪಾಟ್ ಗೆ ಮಣ್ಣು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಇದನ್ನು ಬಿಸಿಲಿನಲ್ಲಿರಿಸಿ. ನಂತರ ಇದಕ್ಕೆ ಸ್ವಲ್ಪ ಸಾವಯವ ಗೊಬ್ಬರ ಹಾಕಿ ಮಿಕ್ಸ್ ಮಾಡಿ ಟೊಮೆಟೊ ಬೀಜವನ್ನು ಹಾಕಿ ಅದರ ಮೇಲೆ ಮಣ್ಣನ್ನು ಉದುರಿಸಿ ನೀರನ್ನು ಚಿಮುಕಿಸಿ. ಬೀಜ ಮೊಳಕೆಯೊಡುವವರೆಗೆ ಪಾಟ್ ಬಿಸಿಲಿನಲ್ಲಿಡಿ. ದಿನ ನೀರನ್ನು ಚಿಮುಕಿಸುವುದನ್ನು ಮರೆಯಬೇಡಿ.
ಇದು ಮೊಳಕೆಯೊಡೆದ ನಂತರ ತಂಪಾದ ಜಾಗದಲ್ಲಿ ಇಡಿ. ಕೆಲವೇ ದಿನಗಳಲ್ಲಿ ಗಿಡದಲ್ಲಿ ಹೂ ಬಿಟ್ಟು ಟೊಮೆಟೊ ಕಾಯಿ ಆಗುವುದಕ್ಕೆ ಶುರುವಾಗುತ್ತದೆ.