ಅನೇಕರಿಗೆ ಪ್ರಯಾಣದ ವೇಳೆ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ದೂರದೂರಿಗೆ ಪ್ರಯಾಣ ಬೆಳೆಸಲು ಅನೇಕರು ಹೆದರುತ್ತಾರೆ. ನಿಮಗೂ ಪ್ರಯಾಣದ ವೇಳೆ ಇಂಥ ಸಮಸ್ಯೆ ಕಾಡಿದ್ರೆ ಭಯಪಡಬೇಕಾಗಿಲ್ಲ. ಕೆಲವೊಂದು ಸುಲಭ ಟಿಪ್ಸ್ ಅನುಸರಿಸಿ ಪ್ರಯಾಣವನ್ನು ಎಂಜಾಯ್ ಮಾಡಿ.
ಮೊದಲನೆಯದಾಗಿ ವಿಮಾನ ಹಾಗೂ ರೈಲಿನಲ್ಲಿ ಸಿಗುವ ಪ್ಯಾಕ್ ಆಹಾರವನ್ನು ಸೇವಿಸಬೇಡಿ. ಇದು ಹೊಟ್ಟೆಯ ಸಮಸ್ಯೆಗೆ ಕಾರಣವಾಗುತ್ತದೆ. ಸಾಧ್ಯವಾದ್ರೆ ಮನೆಯಲ್ಲೇ ಮಾಡಿದ ಆಹಾರವನ್ನು ತೆಗೆದುಕೊಂಡು ಹೋಗಿ, ಅದನ್ನು ಸೇವಿಸಿ. ಪ್ರಯಾಣದ ವೇಳೆ ಹಣ್ಣು ಮತ್ತು ದ್ರವ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ. ಹಾಗೆ ನಿಯಮಿತ ಸಮಯದಲ್ಲಿ ಆಹಾರ ಸೇವನೆ ಮಾಡಿ.
ಪ್ರತಿ ಬಾರಿ ಪ್ರಯಾಣದ ವೇಳೆ ಹೊಟ್ಟೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ವೈದ್ಯರ ಸಲಹೆ ಪಡೆದು ಮಾತ್ರೆಯನ್ನು ತೆಗೆದುಕೊಳ್ಳಿ. ಜೀರ್ಣಕ್ರಿಯೆ ಸುಲಭಗೊಳಿಸುವ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮಲಬದ್ಧತೆ ನಿಮ್ಮನ್ನು ಕಾಡುತ್ತಿದ್ದರೆ ಪ್ರೊಬಯಾಟಿಕ್ ಅಂಶವಿರುವ ಆಹಾರವನ್ನು ಸೇವನೆ ಮಾಡಿ. ಪ್ರಯಾಣದ ಮೊದಲು ಹಾಗೂ ಪ್ರಯಾಣದ ವೇಳೆ ಈ ಪ್ರೊಬಯಾಟಿಕ್ ಸೇವನೆ ಮಾಡಬಹುದು.
ಪ್ರಯಾಣದ ಸಮಯದಲ್ಲಿ ಹೊಟ್ಟೆಯ ತೊಂದರೆಗಳನ್ನು ತಪ್ಪಿಸಲು ಅರ್ಧ ಗ್ಲಾಸ್ ನೀರಿಗೆ ಒಂದು ಚಮಚ ಆ್ಯಪಲ್ ವಿನೇಗರ್ ಹಾಕಿ ಕುಡಿಯಿರಿ. ಇದು ಹೊಟ್ಟೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ವಾಯು, ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಇದನ್ನು ಆಹಾರ ಸೇವನೆ ಮಾಡುವ ಮೊದಲು ಸೇವಿಸಿ.