ಮಲಬದ್ಧತೆ ಸಮಸ್ಯೆ ಹೆಚ್ಚಿನವರಿಗೆ ಕಾಡುತ್ತಿರುತ್ತದೆ. ಬಿಸಿ ನೀರು ಕುಡಿದರೂ, ಯಾವುದೇ ರೀತಿಯ ಆಹಾರ ತಿಂದರೂ ಸರಿಯಾಗಿ ಜೀರ್ಣಕ್ರೀಯೆ ಆಗದೇ ತೊಂದರೆ ಕೊಡುತ್ತಿರುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಿ ಮಲವಿಸರ್ಜನೆ ಆದರೆ ಮಾತ್ರ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ಸುಲಭವಾಗಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಊಟವಾಗಿ ಅರ್ಧ ಗಂಟೆ ಬಳಿಕ ಒಂದು ಬೌಲ್ ಗೆ 2 ಚಮಚ ಬೆಲ್ಲ ಹಾಕಿ ಅದಕ್ಕೆ 2 ಟೀ ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದನ್ನು ತಿನ್ನಿರಿ ಇದರಿಂದ ಜೀರ್ಣಕ್ರೀಯೆ ಸರಾಗವಾಗಿ ಆಗುತ್ತದೆ.
ಇನ್ನು ಖರ್ಬೂರ ಹಣ್ಣಿನಲ್ಲಿ ಸಾಕಷ್ಟು ಫೈಬರ್ ಅಂಶವಿರುತ್ತದೆ. ಇದನ್ನು ಮಧ್ಯಾಹ್ನ 3 ಅಥವಾ ನಾಲ್ಕು ಗಂಟೆಯ ಹೊತ್ತಿನಲ್ಲಿ ಕತ್ತರಿಸಿಕೊಂಡು ಚೆನ್ನಾಗಿ ಜಗಿದು ತಿನ್ನಿರಿ.
ಎಳ್ಳು ಕೂಡ ಮಲಬದ್ಧತೆಯನ್ನು ನಿವಾರಿಸುವಲ್ಲಿ ಸಹಾಯಕಾರಿಯಾಗಿದೆ. ಮನೆಯಲ್ಲಿ ಮಾಡುವ ರೋಟಿ, ಚಪಾತಿಗೆ ಸ್ವಲ್ಪ ಎಳ್ಳನ್ನು ಬೆರೆಸಿರಿ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.