alex Certify ಶತಾಯುಷಿಯಾಗಬೇಕೆಂಬ ಆಸೆ ಇರುವವರಿಗೆ ಇಲ್ಲಿದೆ ಸುಲಭದ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತಾಯುಷಿಯಾಗಬೇಕೆಂಬ ಆಸೆ ಇರುವವರಿಗೆ ಇಲ್ಲಿದೆ ಸುಲಭದ ಟಿಪ್ಸ್

ದೀರ್ಘಾಯುಷ್ಮಾನ್‌ಭವ ಎಂದು ಎಲ್ಲರೂ ಆಶೀರ್ವಾದ ಮಾಡೋದನ್ನು ಕೇಳಿರ್ತೀರಾ. ಆದ್ರೆ ಕೇವಲ ಆಶೀರ್ವಾದದಿಂದ  ಸಾಧ್ಯವಿಲ್ಲ. ಎಷ್ಟೋ ಮಂದಿ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿಬಿಡ್ತಾರೆ. ಇತ್ತೀಚಿನ ದಿನಗಳಲ್ಲಂತೂ ಮನುಷ್ಯನ ವಯಸ್ಸು ಕೇವಲ 60-80 ವರ್ಷಕ್ಕೆ ಸೀಮಿತವಾಗಿದೆ. ಹಾಗಂತ ನೀವು ನಿರಾಶರಾಗಬೇಕಿಲ್ಲ.

ಸಂಶೋಧನೆಯೊಂದರ ಪ್ರಕಾರ ತಜ್ಞರು ಹೇಳುವಂತೆ ಆಹಾರ ಕ್ರಮವನ್ನು ನಿಯಂತ್ರಣದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಗೈಡೆಡ್ ಫಾಸ್ಟಿಂಗ್ ಮಾಡಿದರೆ ಯಾರು ಬೇಕಾದರೂ 100 ವರ್ಷ ಬದುಕಬಹುದು. ಅದು ಸಾಧ್ಯ ಅನ್ನೋದು ಸಾಬೀತಾಗಿದೆ. ಇದನ್ನು ಅನುಸರಿಸಿದ್ರೆ ದೀರ್ಘಾಯುಷ್ಯ ಮಾತ್ರವಲ್ಲ ಆರೋಗ್ಯವಾಗಿಯೂ ಇರುತ್ತಾರೆ.

ಹಾರ ಕ್ರಮವನ್ನು ಸರಿಪಡಿಸಿಕೊಂಡ್ರೆ 100 ವರ್ಷ ಬದುಕುವುದು ಕಷ್ಟವಲ್ಲ ಎನ್ನುತ್ತಾರೆ ತಜ್ಞರು. ಇತ್ತೀಚಿನ ದಿನಗಳಲ್ಲಿ ಜನರು ಅನುಸರಿಸ್ತಾ ಇರೋ ಆಹಾರ ಪದ್ಧತಿ ಅವರ ಆಯುಷ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಕೆಲವರು ಅತಿಯಾಗಿ ತಿಂದರೆ ಇನ್ನು ಕೆಲವರು ಹಸಿವಿನಿಂದ ಉಪವಾಸವಿರ್ತಾರೆ. ಇವೆರಡೂ ಆರೋಗ್ಯಕ್ಕೆ ಹಾನಿಕರ. ಕಡಿಮೆ ತಿನ್ನುವುದರಿಂದ ನಮ್ಮ ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ, ಹೆಚ್ಚು ತಿನ್ನುವುದರಿಂದ ಯೂರಿಕ್ ಆಮ್ಲವು ನಮ್ಮ ದೇಹದಲ್ಲಿ ಹೆಚ್ಚಾಗಿ ಯಕೃತ್ತನ್ನು ಹಾನಿಗೊಳಿಸುತ್ತದೆ.

ಹೆಚ್ಹೆಚ್ಚು ಸಸ್ಯಜನ್ಯ ಆಹಾರಗಳನ್ನು ಸೇವಿಸಬೇಕು. ಉದ್ದಿನ ಬೇಳೆ, ಮೊಳಕೆ ಕಾಳುಗಳು, ಇತರ ಧಾನ್ಯಗಳನ್ನು ಹೆಚ್ಚಾಗಿ ಅಡುಗೆಗೆ ಬಳಸಬೇಕು. ಇದಲ್ಲದೇ ಉಪವಾಸದ ಅಭ್ಯಾಸವನ್ನೂ ರೂಢಿಸಿಕೊಳ್ಳಬೇಕು. ಇದರಿಂದ ನಮ್ಮ ದೇಹವು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಸಕ್ಕರೆಯ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಆಹಾರದಲ್ಲಿ ಸಸ್ಯ ಆಧಾರಿತ ಪ್ರೋಟೀನ್‌, ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬುಗಳನ್ನು ಹೆಚ್ಚಿಸಿದರೆ, ಸಂಸ್ಕರಿಸಿದ ಆಹಾರವನ್ನು ಕಡಿಮೆ ಮಾಡಿದ್ರೆ 100 ವರ್ಷ ಬದುಕಬಹುದು.

ಇದರ ಜೊತೆಗೆ ತಿಂಗಳಿಗೆ ಒಂದು ದಿನ ಉಪವಾಸ ಮಾಡಿದರೆ ದೇಹವು ಇನ್ನಷ್ಟು ಚುರುಕಾಗುತ್ತದೆ. ರೆಡ್‌ ಮೀಟ್‌, ಸಂಸ್ಕರಿಸಿದ ಆಹಾರ, ಸಕ್ಕರೆ ಇವನ್ನು ತ್ಯಜಿಸಬೇಕು. ಅನೇಕ ಪ್ರೋಟೀನ್‌ಗಳು ಮತ್ತು ಅಮೈನೋ ಆಮ್ಲಗಳು ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದು ನಮ್ಮ ದೇಹದ ಜೈವಿಕ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ದೇಹವು ಹೆಚ್ಚು ವೇಗವಾಗಿ ಕ್ಷೀಣಿಸುತ್ತದೆ. ಆದ್ದರಿಂದ ಅತಿಯಾದ ಪ್ರೋಟೀನ್ ಸೇವನೆ ನಮ್ಮ ದೇಹಕ್ಕೆ ಮಾರಕವಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...