ಅನೇಕರಿಗೆ ನಿದ್ದೆ ಒಂದು ವರ. ಇನ್ನೂ ಕೆಲವರಿಗೆ ನಿದ್ದೆ ಒಂದು ಶಾಪ. ಆದರೆ ಬಹಳಷ್ಟು ಮಂದಿಗೆ ನಿದ್ದೆ ಮಾಡೋ ಟೈಮಲ್ಲೂ ನಿದ್ದೆನೇ ಬರಲ್ಲ. ಹಾಗೆ ನಿದ್ದೆ ಬಾರದೇ ಒದ್ದಾಡೋರಿಗಾಗಿ ಇಲ್ಲಿದೆ 5 ಪರಿಣಾಮಕಾರಿ ಟಿಪ್ಸ್.
ಎಚ್ಚವಾಗಿರಲು ಯತ್ನಿಸಿ : ಹೌದು ಇದು ರಿವರ್ಸ್ ಸೈಕಾಲಜಿ. ಎಚ್ಚರವಾಗಿರಬೇಕು ಎಂದು ನಿಮ್ಮ ಮೆದುಳಿಗೆ ಒತ್ತಡ ಹಾಕಿದಾಗ ನಿದ್ದೆ ಬರುವ ಸಾಧ್ಯತೆ ಹೆಚ್ಚು.
ಪಾದಗಳನ್ನು ಬೆಚ್ಚಗಿಡಿ : ಸಾಕ್ಸ್ ಅಥವಾ ಹೊದಿಕೆಯಿಂದ ನಿಮ್ಮ ಪಾದವನ್ನು ಆದಷ್ಟು ಬೆಚ್ಚಗಾಗಿಸಿ ನಿದ್ದೆ ಮಾಡಲು ಯತ್ನಿಸಿ.
4-7-8 ಪ್ರಯತ್ನಿಸಿ : ಮಲಗುವ ಮುನ್ನ 4 ಸೆಕೆಂಡುಗಳ ಕಾಲ ಮೂಗಿನ ಮೂಲಕ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ, 7 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಿ ಹಾಗೂ 8 ಸೆಕೆಂಡುಗಳನ್ನು ಎಣಿಸುತ್ತ ಬಾಯಿಯ ಮೂಲಕ ಉಸಿರನ್ನು ಬಿಡಿ. ಹೀಗೆಯೇ ನಾಲ್ಕಾರು ಬಾರಿ ಮಾಡಿ.
ಮಸಾಲೆ ಹಾಲು ಕುಡಿಯಿರಿ : ರಾತ್ರಿ ಊಟವಾಗಿ 3 ತಾಸುಗಳ ನಂತರ ಮಸಾಲೆ ಹಾಲು ಅಥವಾ ಬೆಚ್ಚಗಿನ ಹಾಲು ಕುಡಿಯಿರಿ.
ಬಬ್ಬಲ್ಸ್ ಊದಿ : ಗುಳ್ಳೆಗಳನ್ನು ಊದುವಾಗ ನೀವು ದೀರ್ಘವಾದ ಶ್ವಾಸೋಚ್ವಾಸ ಮಾಡಬೇಕಾಗುತ್ತದೆ. ಬಾಲ್ಯವನ್ನು ನೆನಪಿಸುವ ಈ ಕ್ರಿಯೆ ನಿಮಗೆ ಖುಷಿ ನೀಡುತ್ತದೆ.