ಮುಖ ಚಂದ್ರನಂತೆ ಹೊಳೆಯಬೇಕು ಎಂಬ ಆಸೆ ಎಲ್ಲ ಹೆಣ್ಣುಮಕ್ಕಳಿಗಿರುತ್ತದೆ. ಆದರೆ ಈಗ ಕೆಮಿಕಲ್ ಯುಕ್ತ ಕ್ರೀಂ, ಸೆರಮ್ ಗಳನ್ನೆಲ್ಲಾ ಉಪಯೋಗಿಸಿಕೊಂಡು ಮುಖದ ಅಂದವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಹಕ್ಕೆ ಒಳ್ಳೆಯ ಆಹಾರ ಸೇರಿದರೆ ಮುಖದ ಅಂದವು ಹೆಚ್ಚುತ್ತದೆ. ಮುಖವು ಕಾಂತಿಯುತವಾಗುತ್ತದೆ.
ಹಾಗಾದ್ರೆ ಯಾವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಎಂದು ತಿಳಿಬೇಕಾ…? ಇಲ್ಲಿದೆ ನೋಡಿ ಮಾಹಿತಿ.
ಲಿಂಬೆಹಣ್ಣು ನೈಸರ್ಗಿಕವಾದ ಬ್ಲಿಚಿಂಗ್ ಏಜೆಂಟ್ ಆಗಿದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದನ್ನು ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ದೇಹದಲ್ಲಿನ ಟಾಕ್ಸಿನ್ ಹೊರ ಹಾಕಲು ಸಹಾಯ ಮಾಡುತ್ತದೆ, ಹೈಪರ್ ಪಿಗ್ಮೆಂಟೇಶನ್ ನಿಂದ ಮುಖವನ್ನು ರಕ್ಷಿಸುತ್ತದೆ. ಕಪ್ಪು ಕಲೆ, ಮೊಡವೆಯಿಂದಲೂ ಮುಖವನ್ನು ಕಾಪಾಡುತ್ತದೆ.
ಒಂದು ಲೋಟ ಬಿಸಿ ನೀರಿಗೆ ಅರ್ಧ ಲಿಂಬೆ ಹಣ್ಣಿನ ರಸ, 1 ಟೀ ಸ್ಪೂನ್ ಜೇನು ತುಪ್ಪವನ್ನು ಸೇರಿಸಿಕೊಂಡು ಕುಡಿದರೆ ದೇಹದಲ್ಲಿನ ಟಾಕ್ಸಿನ್ ಅನ್ನು ಇದು ಹೊರಹಾಕುತ್ತದೆ. ಲಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಬಿಟ್ಟು ಮುಖ ತೊಳೆಯಿರಿ.
ಪಪ್ಪಾಯದಲ್ಲಿ ವಿಟಮಿನ್ ಎ, ಸಿ, ಬಿ ಹೇರಳವಾಗಿದೆ,. ಇದನ್ನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಒಂದು ಬೌಲ್ ಪಪ್ಪಾಯ ಹಣ್ಣಿನ ಹೋಳುಗಳನ್ನು ಬೆಳಿಗ್ಗಿನ ತಿಂಡಿ ಅಥವಾ ಸಂಜೆಯ ಸ್ನ್ಯಾಕ್ಸ್ ಆಗಿ ಸೇವಿಸಿರಿ. ಇನ್ನು ಪಪ್ಪಾಯ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ಮುಖ ತೊಳೆಯಿರಿ. ತ್ವಚೆ ನಳನಳಿಸುತ್ತದೆ.