ಹಲಸಿನ ಹಣ್ಣು ಮಾರ್ಕೆಟ್ ಗೆ ಬಂದಾಗಿದೆ. ಇದರ ಘಮಕ್ಕೆ ಎಲ್ಲರೂ ಮನಸೋಲುತ್ತಾರೆ. ತಿನ್ನಲು ತುಂಬಾ ರುಚಿಕರವಾಗಿರುವ ಈ ಹಣ್ಣನ್ನು ಕತ್ತರಿಸಿ ತೊಳೆ ಬಿಡಿಸುವುದು ತುಸು ಕಷ್ಟದ ಕೆಲಸ. ಹಲಸಿನ ಹಣ್ಣನ್ನು ಕತ್ತರಿಸುವಾಗ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಸುಲಭವಾಗಿ ಕತ್ತರಿಸಬಹುದು ಮತ್ತು ಸ್ಟೋರ್ ಮಾಡಿ ಇಡಬಹುದು.
ಹಲಸಿನ ಹಣ್ಣನ್ನು ಕತ್ತರಿಸಿದಾಗ ಬಿಳಿ ಬಣ್ಣದಲ್ಲಿ ಬರುವ ಹಾಲು ತುಂಬಾ ಜಿಗುಟಾಗಿರುತ್ತದೆ. ಇದು ಕೈಗೆಲ್ಲಾ ಅಂಟಿಕೊಳ್ಳುತ್ತದೆ. ಹಾಗಾಗಿ ಹಲಸಿನ ಹಣ್ಣನ್ನು ಕತ್ತರಿಸುವಾಗ ಅದರ ಕೆಳಗಡೆ ಪೇಪರ್ ಇಟ್ಟುಕೊಳ್ಳಿ. ಹಾಗೇ ಕೈ ಮತ್ತು ಚಾಕುವಿಗೆ ಸಾಸಿವೆ ಎಣ್ಣೆ ಅಥವಾ ಯಾವುದಾದರು ಅಡುಗೆ ಎಣ್ಣೆಯನ್ನು ಸವರಿಕೊಳ್ಳಿ. ಇದರಿಂದ ಅದರ ಹಾಲಿನ ಅಂಟು ಮೆತ್ತಿಕೊಳ್ಳುವುದಿಲ್ಲ.