alex Certify ಹೆಚ್ಚುತ್ತಿರುವ ʼಡೆಂಗ್ಯೂʼ ಸೊಳ್ಳೆಯಿಂದ ಹೀಗೆ ರಕ್ಷಣೆ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚುತ್ತಿರುವ ʼಡೆಂಗ್ಯೂʼ ಸೊಳ್ಳೆಯಿಂದ ಹೀಗೆ ರಕ್ಷಣೆ ಪಡೆಯಿರಿ

ಒಂದೆಡೆ ಕೊರೊನಾ ಹೆಮ್ಮಾರಿ ಎಲ್ಲೆಡೆ ಹರಡುತ್ತಿದ್ದರೆ, ಇತ್ತ ಡೆಂಗ್ಯೂ ಸದ್ದಿಲ್ಲದೆ ಸಮಸ್ಯೆಯುಂಟು ಮಾಡ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಡೆಂಗ್ಯೂ ಶರವೇಗದಲ್ಲಿ ಹರಡುತ್ತಿದೆ. ಡೆಂಗ್ಯೂ ಬರದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

ಡೆಂಗ್ಯೂ ಈಡಿಸ್ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಸೊಳ್ಳೆಗಳಲ್ಲಿ ಇದು ಡೆನ್ 1, 2, 3, 4 ವೈರಸ್ ನಿಂದ ಹರಡುತ್ತದೆ. ಇದನ್ನು ಸಿರೋಟೈಪ್ ಎಂದು ಹೇಳುತ್ತಾರೆ. ಈ ನಾಲ್ಕು ವೈರಸ್ ಅನೇಕ ರೂಪದಲ್ಲಿ ಪ್ರಭಾವ ಬೀರುತ್ತವೆ.

ಡೆಂಗ್ಯೂ ಸೊಳ್ಳೆ ರಾತ್ರಿಯ ಸಮಯದಲ್ಲಿ ಕಚ್ಚುವುದಿಲ್ಲ. ಇವು ಹೆಚ್ಚಾಗಿ ಸೂರ್ಯ ಉದಯಿಸಿದ 2 ಗಂಟೆ ನಂತರ ಅಥವಾ ಸೂರ್ಯ ಮುಳುಗುವ 1 ಗಂಟೆ ಮೊದಲು ಕಚ್ಚುತ್ತವೆ. ಈ ಸೊಳ್ಳೆ ರಾತ್ರಿಯಲ್ಲಿ ಹಾರಾಡುತ್ತಿದ್ದರೂ ಕಚ್ಚುವುದಿಲ್ಲ.

ಡೆಂಗ್ಯೂ ಸೊಳ್ಳೆ ಬೆಳಕಿಲ್ಲದ ಪ್ರದೇಶದಲ್ಲಿ ಹೆಚ್ಚು ಹುಟ್ಟುತ್ತವೆ. ಈ ಸೊಳ್ಳೆ ಆಫೀಸ್, ಮಾಲ್, ಸ್ಟೇಡಿಯಮ್ ಮತ್ತು ಒಳಾಂಗಣ ಆಡಿಟೋರಿಯಮ್ ಗಳಲ್ಲಿ ಹೆಚ್ಚಿರುತ್ತವೆ. ಇಂತಹ ಪ್ರದೇಶದಲ್ಲಿ ನೈಸರ್ಗಿಕ ಬೆಳಕು ಕಡಿಮೆ ಇರುತ್ತದೆ. ಆರ್ಟಿಫಿಶಿಯಲ್ ಬೆಳಕು ಹೆಚ್ಚಿರುವುದರಿಂದ ಇಲ್ಲಿ ಡೆಂಗ್ಯೂ ಸೊಳ್ಳೆಗಳು ಹೆಚ್ಚು.

ಡೆಂಗ್ಯೂ ಜ್ವರ ಸೊಳ್ಳೆ ಕಡಿದ 4-6 ದಿನಗಳ ನಂತರ ಕಾಣಿಸಿಕೊಳ್ಳುತ್ತದೆ. ಒಮ್ಮೆಲೇ ಜ್ವರ, ತೀವ್ರ ತಲೆನೋವು, ಕಣ್ಣುಗುಡ್ಡೆಗಳ ನೋವು, ಮಾಂಸಖಂಡಗಳ ಸೆಳೆತ, ವಾಂತಿ, ದೇಹದಲ್ಲಿ ದದ್ದು, ಮೂಗು ಅಥವಾ ವಸಡಿನಲ್ಲಿ ಸ್ವಲ್ಪ ರಕ್ತಸ್ರಾವ ಮುಂತಾದವು ಡೆಂಗ್ಯೂವಿನ ಲಕ್ಷಣವಾಗಿದೆ.

ಸೊಳ್ಳೆ ಹಗಲಿನಲ್ಲಿ ಕಚ್ಚುವುದರಿಂದ ಮೈ ಪೂರ್ತಿಯಾಗಿ ಮುಚ್ಚುವಂತ ಬಟ್ಟೆ ಧರಿಸಬೇಕು. ಬಟ್ಟೆಗೆ ಕೆಲವು ಸ್ಪ್ರೇ ಗಳನ್ನು ಕೂಡ ಬಳಸಬಹುದು. ಮನೆಯ ಒಳಗೆ, ಸುತ್ತಮುತ್ತ, ಕೂಲರ್, ಟಯರ್ ಗಳಲ್ಲಿ ನೀರು ನಿಲ್ಲಲು ಬಿಡಬಾರದು. ಹಗಲಿನ ಸಮಯದಲ್ಲೂ ಮನೆಯಲ್ಲಿ ಸೊಳ್ಳೆ ಪರದೆ ಬಳಸಿ, ಸ್ಪ್ರೇ ಕೂಡ ಹಾಕಬಹುದು. ನೀರನ್ನು ಕುದಿಸಿ ಅಥವಾ ಫಿಲ್ಟರ್ ಮಾಡಿ ಕುಡಿಯಬೇಕು. ಡೆಂಗ್ಯೂ ಜ್ವರಕ್ಕೆ ನಿಶ್ಚಿತವಾದ ಔಷಧಿ ಇಲ್ಲವಾದರಿಂದ ಜ್ವರದ ಸಮಯದಲ್ಲಿ ಹೆಚ್ಚು ವಿರಾಮ ಮಾಡಬೇಕು. ರಕ್ತದಲ್ಲಿ ಪ್ಲೇಟ್ಲೆಟ್ ಪ್ರಮಾಣವನ್ನು ಪರೀಕ್ಷಿಸುತ್ತಿರಬೇಕು. ಪಪ್ಪಾಯಿ, ದಾಳಿಂಬೆ, ಹಸಿರು ತರಕಾರಿ, ಕಿವಿ ಕಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...