alex Certify ಗುಜರಿ ಸಾಮಗ್ರಿ ಬಳಸಿ ವೆಂಟಿಲೇಟರ್​ ರೂಪಿಸಿದ ದಿನಗೂಲಿ ಕಾರ್ಮಿಕನ ಪುತ್ರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಿ ಸಾಮಗ್ರಿ ಬಳಸಿ ವೆಂಟಿಲೇಟರ್​ ರೂಪಿಸಿದ ದಿನಗೂಲಿ ಕಾರ್ಮಿಕನ ಪುತ್ರ..!

ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ದೇಶದಲ್ಲಿ ವೆಂಟಿಲೇಟರ್​​ಗಳ ಅಭಾವ ಉಂಟಾಗುತ್ತಿರೋದನ್ನ ಗಮನಿಸಿದ ಕಾಶ್ಮೀರ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಗುಜರಿ ಸಾಮಗ್ರಿಗಳನ್ನ ಬಳಸಿ ಪೋರ್ಟಬಲ್​ ವೆಂಟಿಲೇಟರ್​ನ್ನು ಕಂಡು ಹಿಡಿದಿದ್ದಾರೆ.

ಇದೊಂದು ಕ್ಲೌಡ್​ ಬೇಸಡ್​ ಸಿಸ್ಟಂ ಆಗಿದ್ದು ವೈದ್ಯರು ತಮ್ಮ ಮೊಬೈಲ್​ ಸಹಾಯದಿಂದ ಇದನ್ನ ನಿಯಂತ್ರಿಸಬಹುದಾಗಿದೆ.

20 ವಯಸ್ಸಿನ ಆಸುಪಾಸಿನ ಈ ವಿದ್ಯಾರ್ಥಿಗಳು ದೇಶದಲ್ಲಿ ಕೋವಿಡ್​ ಸಂಕಷ್ಟಕ್ಕೆ ನೆರವಾಗಲಿ ಎಂಬ ಕಾರಣಕ್ಕೆ ಗ್ರಾಹಕ ಸ್ನೇಹಿ ವೆಂಟಿಲೇಟರ್​ನ್ನು ಅಭಿವೃದ್ಧಿ ಪಡಿಸಿದ್ದಾರೆ.

ದಿನಗೂಲಿ ಕಾರ್ಮಿಕನ ಪುತ್ರನಾದ ಸಾಜೀದ್​ ನೂರ್ ಗೆ​​ ಮನೆಯಲ್ಲಿ ಸಂಕಷ್ಟ ಸಾವಿರ ಇದ್ದರೂ ಸಹ ಲಾಕ್​ಡೌನ್​ ಸಮಯದಲ್ಲಿ ದೇಶಕ್ಕೆ ಅನುಕೂಲವಾಗುವಂತದ್ದು ಏನಾದರೊಂದು ಮಾಡಬೇಕು ಎಂಬ ಹೆಬ್ಬಯಕೆ ಇತ್ತು.

ಹೀಗಾಗಿ ಗೆಳೆಯ ಜಹಾಂಗೀರ್​ ಜೊತೆ ಸೇರಿದ ಸಾಜಿದ್​ ಗುಜರಿ ಸಾಮಗ್ರಿಗಳನ್ನೇ ಬಳಸಿ ಕಠಿಣ ಪರಿಶ್ರಮ ಪಟ್ಟು ವೆಂಟಿಲೇಟರ್​ ತಯಾರಿಸೋಕೆ ಮುಂದಾಗಿದ್ದಾರೆ.

ತಿಂಗಳಾನುಟ್ಟಲೇ ಪ್ರಯತ್ನದ ಬಳಿಕ ಈ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ವೆಂಟಿಲೇಟರ್​ ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೆಂಟಿಲೇಟರ್​ನ ಬೆಲೆ 20 ಸಾವಿರಕ್ಕಿಂತಲೂ ಕಡಿಮೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...