alex Certify ಮನಕಲಕುತ್ತೆ ವಿಮಾನ ನಿಲ್ದಾಣದಲ್ಲಿ ಅಂಗಲಾಚಿದ ಯುವತಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ವಿಮಾನ ನಿಲ್ದಾಣದಲ್ಲಿ ಅಂಗಲಾಚಿದ ಯುವತಿ ವಿಡಿಯೋ

ಅಫ್ಘಾನಿಸ್ತಾನವು ತಾಲಿಬಾನ್ ವಶವಾದ ಬಳಿಕ ಸಾಕಷ್ಟು ಆಘಾತಕಾರಿ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ.

ಇದೀಗ ಕಾಬೂಲ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತೊಂದು ಶಾಕಿಂಗ್​ ವಿಡಿಯೋ ಬೆಳಕಿಗೆ ಬಂದಿದೆ.

ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಅಫ್ಘಾನಿಸ್ತಾನದ ಯುವತಿಯು ಅಮೆರಿಕದ ಸೈನಿಕರ ವಿಮಾನ ನಿಲ್ದಾಣದ ಒಳಕ್ಕೆ ಪ್ರವೇಶಿಸಲು ಅನುಮತಿ ನೀಡುವಂತೆ ಬೇಡಿಕೊಳ್ಳುತ್ತಿರೋದನ್ನು ಕಾಣಬಹುದಾಗಿದೆ.

ದಯಮಾಡಿ ನನಗೆ ಸಹಾಯ ಮಾಡಿ. ಆ ತಾಲಿಬಾನಿಗಳು ನನಗಾಗೇ ಬರ್ತಿದ್ದಾರೆ ಎಂದು ಯುವತಿಯು ಸ್ಥಳೀಯ ಭಾಷೆಯಲ್ಲಿ ಅಂಗಲಾಚಿದ್ದಾಳೆ.

ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ತಾಲಿಬಾನಿ ಉಗ್ರರು ಕಾಬೂಲ್​ ವಿಮಾನ ನಿಲ್ದಾಣ ತಲುಪದಂತೆ ಜನರನ್ನು ಅಡ್ಡಗಟ್ಟುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಅಫ್ಘಾನಿಸ್ತಾನದಲ್ಲಿರುವ ಪ್ರತಿಯೊಬ್ಬ ಅಮೆರಿಕನ್ನರು ಅಲ್ಲಿಂದ ಸ್ಥಳಾಂತರಗೊಳ್ಳುವವರೆಗೂ ಅಮೆರಿಕ ಸೇನೆ ಅಫ್ಘನ್​​ನಲ್ಲೇ ಬೀಡು ಬೀಡಲಿದೆ ಎಂದು ಹೇಳಿದ್ದಾರೆ.

— Aftab Baloch (@balochkhan63) August 18, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...