
ಇದೀಗ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತೊಂದು ಶಾಕಿಂಗ್ ವಿಡಿಯೋ ಬೆಳಕಿಗೆ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಅಫ್ಘಾನಿಸ್ತಾನದ ಯುವತಿಯು ಅಮೆರಿಕದ ಸೈನಿಕರ ವಿಮಾನ ನಿಲ್ದಾಣದ ಒಳಕ್ಕೆ ಪ್ರವೇಶಿಸಲು ಅನುಮತಿ ನೀಡುವಂತೆ ಬೇಡಿಕೊಳ್ಳುತ್ತಿರೋದನ್ನು ಕಾಣಬಹುದಾಗಿದೆ.
ದಯಮಾಡಿ ನನಗೆ ಸಹಾಯ ಮಾಡಿ. ಆ ತಾಲಿಬಾನಿಗಳು ನನಗಾಗೇ ಬರ್ತಿದ್ದಾರೆ ಎಂದು ಯುವತಿಯು ಸ್ಥಳೀಯ ಭಾಷೆಯಲ್ಲಿ ಅಂಗಲಾಚಿದ್ದಾಳೆ.
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ತಾಲಿಬಾನಿ ಉಗ್ರರು ಕಾಬೂಲ್ ವಿಮಾನ ನಿಲ್ದಾಣ ತಲುಪದಂತೆ ಜನರನ್ನು ಅಡ್ಡಗಟ್ಟುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅಫ್ಘಾನಿಸ್ತಾನದಲ್ಲಿರುವ ಪ್ರತಿಯೊಬ್ಬ ಅಮೆರಿಕನ್ನರು ಅಲ್ಲಿಂದ ಸ್ಥಳಾಂತರಗೊಳ್ಳುವವರೆಗೂ ಅಮೆರಿಕ ಸೇನೆ ಅಫ್ಘನ್ನಲ್ಲೇ ಬೀಡು ಬೀಡಲಿದೆ ಎಂದು ಹೇಳಿದ್ದಾರೆ.