ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗಂಗಾ ನದಿಯ ಫಾಫಾಮೌ ಘಾಟ್ನಲ್ಲಿ ಶವಸಂಸ್ಕಾರವನ್ನ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ನದಿಗಳಲ್ಲಿ ಶವ ತೇಲುವುದನ್ನ ತಡೆಯುವ ಸಲುವಾಗಿ ಪ್ರಯಾಗ್ರಾಜ್ ಆಡಳಿತ ಮಂಡಳಿ ಶವಗಳನ್ನ ದಡದಲ್ಲಿ ದಹನ ಮಾಡುವ ಕೆಲಸ ಮಾಡಿತ್ತು. ಕಳೆದ 24 ಗಂಟೆಗಳಲ್ಲಿ ಪುರಸಭೆ 150 ಶವಗಳ ಅಂತ್ಯಕ್ರಿಯೆ ಮಾಡಿದೆ. ಆದರೆ ಭಾರೀ ಮಳೆಯಿಂದಾಗಿ ಘಾಟ್ ಜಲಾವೃತವಾದ ಹಿನ್ನೆಲೆ ಶವಸಂಸ್ಕಾರವನ್ನ ನಿಲ್ಲಿಸಲಾಗಿದೆ.
ಫಾಫಾಮೌ ಘಾಟ್ ಮುಳುಗುವ ವೇಳೆಯಲ್ಲಿಯೂ ಹಲವಾರು ಶವಗಳು ಹಾಗೂ ಕಟ್ಟಿಗೆಗಳು ನೀರಿನಲ್ಲಿ ತೇಲಿದ ದೃಶ್ಯಗಳು ಕಂಡುಬಂದಿದೆ.
ಕೋವಿಡ್ನಿಂದ ಜನರ ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಮೃತದೇಹಗಳನ್ನ ನಿರ್ವಹಣೆ ಮಾಡೋದೇ ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲ ದಿನಗಳ ಹಿಂದಷ್ಟೇ ಗಂಗಾನದಿಯಲ್ಲಿ ಶವಗಳು ತೇಲುತ್ತಿರುವ ಸಾಕಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಗಂಗಾನದಿಯಲ್ಲಿ ಶವಗಳು ತೇಲೋದನ್ನ ತಪ್ಪಿಸುವ ಸಲುವಾಗಿ ಇಲ್ಲಿನ ಪುರಸಭೆ ಎಲ್ಲಾ ಶವಗಳನ್ನ ಅಂತ್ಯಕ್ರಿಯೆ ಮಾಡುವ ನಿರ್ಧಾರಕ್ಕೆ ಬಂದಿತ್ತು.