alex Certify ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಗಲಾಟೆ ? ಮುಂಬೈ ಬೀದಿಯಲ್ಲಿ 2 ಗುಂಪಿನ ನಡುವೆ ಗುಂಡಿನ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಗಲಾಟೆ ? ಮುಂಬೈ ಬೀದಿಯಲ್ಲಿ 2 ಗುಂಪಿನ ನಡುವೆ ಗುಂಡಿನ ದಾಳಿ

ಮುಂಬೈ ಸಮೀಪದ ರಸ್ತೆಯೊಂದರಲ್ಲಿ ಭಾನುವಾರ ಹಾಡಹಗಲೇ ಮನಬಂದಂತೆ ಗುಂಡಿನ ದಾಳಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಎರಡು ಗುಂಪುಗಳು ಜಗಳವಾಡಿದ ನಂತರ ಸುಮಾರು 15-20 ಸುತ್ತು ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.

ಘಟನೆಯ ಸಮಯದಲ್ಲಿ ಚಿತ್ರೀಕರಿಸಲಾದ ವೀಡಿಯೊ ಕ್ಲಿಪ್‌ನಲ್ಲಿ, ಕೆಲವು ಪುರುಷರು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳ ಸುತ್ತಲೂ ನಿಂತಿರುವುದನ್ನು ಕಾಣಬಹುದು. ಇತರ ವಾಹನಗಳು ಹಾದು ಹೋಗುತ್ತಿರುವಾಗಲೂ ಎದುರಿನಿಂದ ಇದ್ದಕ್ಕಿದ್ದಂತೆ ಗುಂಡು ಹಾರಿಸಲಾಗುತ್ತದೆ.

ಗುಂಡಿನ ದಾಳಿ ಮುಂದುವರಿದಂತೆ ಕೆಲವರು ರಕ್ಷಣೆಗಾಗಿ ಓಡುತ್ತಿರುವುದನ್ನು ಕಾಣಬಹುದು. ಇತರರು ನಿಲುಗಡೆ ಮಾಡಿದ ಕಾರುಗಳ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸುತ್ತಾರೆ.

ವರದಿಗಳ ಪ್ರಕಾರ ಅಂಬರನಾಥ್‌ನಲ್ಲಿ ನಡೆದ ಎತ್ತಿನಗಾಡಿ ಓಟದ ವೇಳೆ ಇಬ್ಬರ ನಡುವಿನ ವಾಗ್ವಾದವೇ ಘಟನೆಗೆ ಕಾರಣ ಎನ್ನಲಾಗಿದೆ. ವಾದ-ವಿವಾದದ ನಂತರ ಎರಡು ಗುಂಪುಗಳು ಹೊಡೆದಾಟದಲ್ಲಿ ತೊಡಗಿಕೊಂಡಿವೆ. ಒಂದು ಗುಂಪು ಮತ್ತೊಂದರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದೆ. ಸ್ಥಳಕ್ಕೆ ಶಿವಾಜಿನಗರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...