alex Certify ಹೆಗಲ ಮೇಲೆ ಮಗಳು, ಮಗಳ ಮೇಲೊಂದು ಕೊಡೆ: ಅಮ್ಮನ ಪ್ರೀತಿಗೆ ಎಣೆ ಎಲ್ಲಿ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಗಲ ಮೇಲೆ ಮಗಳು, ಮಗಳ ಮೇಲೊಂದು ಕೊಡೆ: ಅಮ್ಮನ ಪ್ರೀತಿಗೆ ಎಣೆ ಎಲ್ಲಿ…..?

ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಲಾಗುತ್ತದೆ. ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಎಳ್ಳಷ್ಟು ಕಷ್ಟವಾಗಲು ತಾಯಿ ಬಿಡಳು. ಅಂಥದ್ದೇ ಒಂದು ಹೃದಯ ಮೆಚ್ಚುವ ವಿಡಿಯೋ ವೈರಲ್​ ಆಗಿದ್ದು, ಈ ವಿಡಿಯೋ ನೋಡಿ ಎಲ್ಲರೂ ಭಾವುಕರಾಗುವಂತಾಗಿದೆ.

ಮಳೆಯಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ. ಇದು ಹೊಸ ವಿಷಯವಲ್ಲದಿದ್ದರೂ ಹೆಗಲ ಮೇಲೆ ಮಗಳನ್ನು ಕುಳ್ಳರಿಸಿಕೊಂಡಿರುವ ಅಮ್ಮ, ಆಕೆ ಒದ್ದೆಯಾಗದಂತೆ ಕೊಡೆ ಹಿಡಿದಿರುವುದು ಎಲ್ಲರ ಮನ ಗೆದ್ದಿದೆ.

ಈ ಅದ್ಭುತ ವಿಡಿಯೋವನ್ನು Zindagi Gulzar Hai ಎಂಬ ಪುಟವು ಹಂಚಿಕೊಂಡಿದೆ, ಈ ವಿಡಿಯೋ ಇದಾಗಲೇ 37 ಸಾವಿರ ವೀಕ್ಷಣೆಗಳನ್ನು ಹೊಂದಿದೆ. 18 ಸೆಕೆಂಡ್‌ಗಳ ವಿಡಿಯೋ ಇದಾಗಿದೆ. ಮಗಳು ಮಳೆಯಲ್ಲಿ ನೆನೆಯಬಾರದೆಂದು ಒಂದು ಕೈಯಲ್ಲಿ ಕೊಡೆಯನ್ನೂ ಹಿಡಿದಿರುವುದು ಅದ್ಭುತ, ತಾಯಿಯ ಪ್ರೀತಿ ಎಂದರೆ ಇದೆ ಅಲ್ಲವೆ ಎಂದು ಹಲವರು ಕಮೆಂಟ್​ನಲ್ಲಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...