ಮ್ಯಾಕ್ ಪೋರ್ಟರ್ ಎಂಬ ಮೂರು ವರ್ಷದ ಬಾಲಕನ ಮನಸ್ಸಿನ ತುಂಬೆಲ್ಲ , ತಾನು ಆಸ್ಪತ್ರೆಯಿಂದ ಹೊರಬಿದ್ದ ಕೂಡಲೇ ಬೆಸ್ಟ್ ಫ್ರೆಂಡ್ ಪೇಸನ್ ಆಲ್ಟೈಸ್ ಜತೆಗೆ ಆಟವಾಡಬೇಕು ಎನ್ನುವುದಾಗಿತ್ತು. ಆದರೆ, ಕ್ರೂರ ವಿಧಿಯು ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಗೆ ಕ್ಯಾನ್ಸರ್ ಕಾಯಿಲೆ ಕೊಟ್ಟು ಚಿಕಿತ್ಸೆಗಾಗಿ ಆಸ್ಪತ್ರೆಗೆ ನೂಕಿತ್ತು.
ಮ್ಯಾಕ್ -ಪೇಸನ್ ಬೆಸ್ಟ್ ಫ್ರೆಂಡ್ಸ್ ಆಗಿದ್ದು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಎನ್ನುವುದು ವಿಶೇಷ. ಸ್ನೇಹದ ಬಂಧನದಲ್ಲಿ ಇಬ್ಬರೂ ಮುಳುಗಿದ್ದರಿಂದ ಸುಲಭವಾಗಿ ಕ್ಯಾನ್ಸರ್ ಜಯಿಸಿದ ಫೀನಿಕ್ಸ್ ಮಕ್ಕಳ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮಕ್ಕಳು ಆಸ್ಪತ್ರೆಯ ಆವರಣದ ಪಾರ್ಕಿನಲ್ಲಿ ಖುಷಿಯಿಂದ ಆಟವಾಡಿದ್ದಾರೆ. ತಬ್ಬಿಕೊಂಡು ಮುದ್ದಾಡಿದ್ದಾರೆ. ಈ ಕ್ಷಣಗಳನ್ನು ಅವರ ಪೋಷಕರು ಸೆರೆಹಿಡಿದು ಇನ್‍ಸ್ಟ್ರಾಗ್ರಾಂನಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ.
ಲಿಂಗ ಬಹಿರಂಗ ಕಾರ್ಯಕ್ರಮ ಏರ್ಪಡಿಸಿ ಸಂಕಷ್ಟಕ್ಕೆ ಸಿಲುಕಿದ ಯೂಟ್ಯೂಬರ್
ಕೊರೊನಾ ಮಹಾಮಾರಿಯ ಆತಂಕದ ಕಾಲದಲ್ಲಿ ಮುಗ್ಧ ಮಕ್ಕಳ ಈ ಸ್ನೇಹ, ನಮಗೆಲ್ಲ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸುವಂತಿದೆ. ನೆಟ್ಟಿಗರು ಮಕ್ಕಳ ಈ ವಿಡಿಯೋವನ್ನು ವೈರಲ್ ಮಾಡಿ, ಮಾನವ ಬಾಂಧವ್ಯದ ಮಹತ್ವಕ್ಕೆ ಸಾಕ್ಷಿ ಎಂದು ಹೆಮ್ಮೆಪಡುತ್ತಿದ್ದಾರೆ.
https://www.youtube.com/watch?v=cNyRckkyPRw