ಮನುಷ್ಯ ಹಾಗೂ ಶ್ವಾನಗಳ ನಡುವಿನ ಬಾಂಧವ್ಯ ಎಂತಾದ್ದು ಎಂದು ಸಾರುವಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ರೌಂಡ್ಸ್ ಹಾಕುತ್ತಿದೆ.
ಇಂಡಿಗೋದ ಸಿಬ್ಬಂದಿಯಾದ ಜೋಸೆಫ್ ರೋಡ್ರಿಗಸ್ ಎಂಬವರು ಬಿಳಿ ಬಣ್ಣದ ಬೀದಿ ನಾಯಿ ವೈಟಿ ಜೊತೆ ಸ್ನೇಹ ಸಂಪಾದಿಸಿದ್ದರು. ಇವರಿಬ್ಬರೂ ಅಂಧೇರಿಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು.
ಆದರೆ ಒಂದು ದಿನ ವೈಟಿಯ ಮತ್ತೊಬ್ಬ ಸ್ನೇಹಿತ ಕಳೆದುಹೋಗಿದ್ದಾನೆ ಅನ್ನೋದು ರೋಡ್ರಿಗಸ್ ಗಮನಕ್ಕೆ ಬಂದಿತು. ಸ್ನೇಹಿತನಿಲ್ಲದೇ ವೈಟಿ ಹಾಗೂ ಬ್ರೌನಿ ಎಂಬ ಹೆಸರಿನ ನಾಯಿಗಳು ಖಿನ್ನತೆಗೆ ಒಳಗಾಗಿದ್ದವು. ಅವಕ್ಕೆ ಹೇಗಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಜೋಸೆಫ್ ಹತ್ತಿರದ ಪ್ರಾಣಿ ಪ್ರಿಯರಿಗೆ ಮಾಹಿತಿ ನೀಡಿದ್ರು.
ಇದಾದ ಬಳಿಕ ಪ್ರಿಯಾಂಶು ಶರ್ಮಾ, ಕಲ್ಯಾಣಿ ಚೈತನ್ಯ ಹಾಗೂ ಸುಧೀಕರ್ ಕುಡ್ಲಾಕರ್ ಇವರ ಸಹಾಯಕ್ಕೆ ಧಾಮಿಸಿದ್ರು. ಬಾಂದ್ರಾ ಹಾಗೂ ಮಲಾಡ್ನ ಬಿಎಂಸಿ ಪ್ರಾಣಿ ಕೇಂದ್ರದಲ್ಲಿ ಪರಿಶೀಲನೆ ಮಾಡಿ ವೇಳೆ ವೈಟಿಯ ಸ್ನೇಹಿತ ಸಿಕ್ಕಿದೆ. ಇವರೆಲ್ಲರ ಪುನರ್ ಸಮ್ಮಿಲನ ಮನಕಲಕುವಂತಿದ್ದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.