ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು ಎಷ್ಟು ಕಷ್ಟವೋ ಪ್ರೀತಿ ಪಾತ್ರರಿಗೂ ಕೂಡ ತಮ್ಮವರನ್ನು ಬಿಟ್ಟು ಬೇರೆ ಲೋಕಕ್ಕೆ ತೆರಳುವುದು ಕೂಡ ಅಷ್ಟೇ ಕಷ್ಟ. ಅದರಲ್ಲೂ ನಮ್ಮ ಬಳಿ ಇನ್ನು ಹೆಚ್ಚು ಸಮಯ ಇಲ್ಲ ಎಂದು ಗೊತ್ತಾದಾಗ ಆಗುವ ನೋವನ್ನು ವಿವರಿಸಲೂ ಸಾಧ್ಯವಿಲ್ಲ. ಇಂತಹದ್ದೊಂದು ಮನ ಮಿಡಿಯುವ ದೃಶ್ಯವೊಂದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಜೀವಕ್ಕೆ ಸಂಚಕಾರ ತಂದ ಮದ್ಯಪಾನ: ನಕಲಿ ಮದ್ಯ ಸೇವಿಸಿದ 32 ಮಂದಿ ದಾರುಣ ಸಾವು
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ 68 ವರ್ಷದ ವೃದ್ಧೆ ತನ್ನ ಅಂತಿಮ ಆಸೆಯಾಗಿ ತನ್ನ ಪ್ರೀತಿಯ ಎರಡು ನಾಯಿಗಳು ಹಾಗೂ ಕುದುರೆಯನ್ನು ಕೊನೆಯ ಬಾರಿಗೆ ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಜಾನ್ ಹೋಲ್ಮನ್ ಎಂಬ ವೃದ್ಧೆಯು ಕೊನೆಯ ಬಾರಿಗೆ ತನ್ನ ಪ್ರೀತಿಯ ಸಾಕು ಪ್ರಾಣಿಗಳನ್ನು ಭೇಟಿಯಾಗಿದ್ದು ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೃದ್ಧೆ ಪ್ರಾಣಿಗಳಿಗೆ ಕ್ಯಾರಟ್ ಹಾಗೂ ಬಾಳೆಹಣ್ಣುಗಳನ್ನು ತಿನ್ನಲು ನೀಡಿದ್ದಾರೆ.
ಆರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ತನ್ನ ಪ್ರಾಣಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಮನೆಗೆ ತೆರಳಿ ಅವುಗಳನ್ನು ಕೊನೆಯ ಬಾರಿ ನೋಡುವಷ್ಟು ಸಮಯ ಜಾನ್ ಬಳಿ ಇಲ್ಲದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಗೆ ಪ್ರಾಣಿಗಳನ್ನು ಕರೆಯಿಸಿದ್ದಾರೆ.