alex Certify ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವ ಪ್ರಕರಣಗಳಲ್ಲಿ ಹೆಚ್ಚಳ; ಟ್ವಿಟ್ಟರ್‌ ನಲ್ಲಿ ವಿಡಿಯೋ ಹಂಚಿಕೊಂಡ ಆತಂಕ ಹೊರ ಹಾಕಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವ ಪ್ರಕರಣಗಳಲ್ಲಿ ಹೆಚ್ಚಳ; ಟ್ವಿಟ್ಟರ್‌ ನಲ್ಲಿ ವಿಡಿಯೋ ಹಂಚಿಕೊಂಡ ಆತಂಕ ಹೊರ ಹಾಕಿದ ನೆಟ್ಟಿಗರು

ಜಬಲ್ಪುರ: ಸಾವು ಹೇಗೆ ಬರುತ್ತದೆ ಎಂದು ಹೇಳುವುದೇ ಕಷ್ಟ. ಅದೃಷ್ಟ ಕೆಟ್ಟಿದ್ದರೆ ಸುಮ್ಮನೆ ಹೋಗುವಾಗಲೂ ಸಾವು ಬರಬಹುದು. ಅದೇ ರೀತಿ ಹೃದಯಾಘಾತವಂತೂ ಇದೀಗ ಸಾಮಾನ್ಯ ಎನಿಸಿಬಿಟ್ಟಿದೆ. ಇಂಥದ್ದೇ ಒಂದು ಭಯಾನಕ ವಿಡಿಯೋ ಇದೀಗ ವೈರಲ್​ ಆಗಿದೆ.

ಬಸ್ ಚಲಾಯಿಸುತ್ತಿರುವಾಗಲೇ ಚಾಲಕನೊಬ್ಬನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದ್ದು ಇದರ ಭಯಾನಕ ವಿಡಿಯೋ ವೈರಲ್​ ಆಗಿದೆ. ಈತ ಚಾಲನೆ ಮಾಡುತ್ತಿರುವಾಗಲೇ ಹೃದಯಾಘಾತವಾಗಿದ್ದರಿಂದ ಬಸ್ಸು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಬಸ್​ ಅಡ್ಡಾದಿಡ್ಡಿ ಚಲಿಸಿ ಕಂಡ ಕಂಡ ವಾಹನಗಳಿಗೆ ಡಿಕ್ಕಿ ಹೊಡೆದಿರುವುದನ್ನು ಸಿಸಿಟಿವಿಯಲ್ಲಿ ನೋಡಬಹುದಾಗಿದೆ. ಸಿಟಿ ಬಸ್ ಗೋಹಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಸರ್ಕಲ್​ನಲ್ಲಿ ರೆಡ್ ಸಿಗ್ನಲ್​ ಬಿದ್ದಾಗ ವಾಹನ ಸವಾರರು ನಿಂತಿದ್ದರು. ಅವರ ಮೇಲೆ ಬಸ್​ ಹಾದು ಹೋಗಿದೆ. ಈ ಘಟನೆಯ ನಂತರ ಟ್ವಿಟರ್​ನಲ್ಲಿ ಹ್ಯಾಷ್​ಟ್ಯಾಗ್​ ಜತೆಗೆ ಹಾರ್ಟ್​ಆಟ್ಯಾಕ್​ ಕುರಿತು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...