ಸೋಮವಾರದಂದು ಉಡುಪಿ ಜಿಲ್ಲೆ ಮಲ್ಪೆ ಸಮೀಪದ ತೊಟ್ಟಂ ಕಡಲ ತೀರದಲ್ಲಿ ಲಕ್ಷಾಂತರ ಬೂತಾಯಿ ಮೀನುಗಳು ಬಂದು ಬಿದ್ದಿದ್ದು, ಇವುಗಳನ್ನು ಆಯ್ದುಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಲಕ್ಷಾಂತರ ಸಂಖ್ಯೆಯಲ್ಲಿ ಗುಂಪು ಗುಂಪಾಗಿ ಚಲಿಸುವ ಈ ಮೀನುಗಳು ದಾರಿತಪ್ಪಿ ಕಡಲ ತೀರಕ್ಕೆ ಬಂದ ವೇಳೆ ಅಲೆಯ ಹೊಡೆತಕ್ಕೆ ಸಿಲುಕಿ ಬಂದು ಬೀಳುತ್ತವೆ ಎಂದು ಹೇಳಲಾಗಿದೆ.
ಹೀಗಾಗಿ ಸೋಮವಾರದಂದು ಈ ರೀತಿ ಜೀವಂತವಾಗಿ ಬಂದು ಬಿದ್ದಿದ್ದ ಬೂತಾಯಿ ಮೀನುಗಳನ್ನು ಹೆಕ್ಕಿಕೊಂಡ ಜನ ನೆಚ್ಚಿನ ಖಾದ್ಯ ತಯಾರಿಸಿದ್ದಾರೆ. ಈ ಮೀನುಗಳಿಗೆ ಮಾರುಕಟ್ಟೆಯಲ್ಲಿಯೂ ಬೇಡಿಕೆ ಇದ್ದು, ಕೆಲವರು ಮಾರಾಟವನ್ನೂ ಸಹ ಮಾಡಿದ್ದಾರೆ ಎನ್ನಲಾಗಿದೆ.