alex Certify ಚಳಿಗಾಲದಲ್ಲಿ ನೀವು ಇದನ್ನು ಸೇವಿಸಿದ್ರೆ ಎಷ್ಟೆಲ್ಲ ಲಾಭವಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ನೀವು ಇದನ್ನು ಸೇವಿಸಿದ್ರೆ ಎಷ್ಟೆಲ್ಲ ಲಾಭವಿದೆ ಗೊತ್ತಾ….?

ಚೆಸ್ಟ್ನಟ್ ಇದೊಂದು ಪಿಷ್ಟ ರೂಪದ ತರಕಾರಿ. ಇದನ್ನು ಚಳಿಗಾಲದಲ್ಲಿ ತಿನ್ನಲು ತುಂಬ ಚೆನ್ನಾಗಿರುತ್ತದೆ. ಇದು ತಿನ್ನಲು ಎಷ್ಟು ರುಚಿಕರವಾಗಿರತ್ತದೆಯೋ ಅಷ್ಟೇ ಆರೋಗ್ಯಕ್ಕೂ  ಒಳ್ಳೆಯದು. ಕೆಲವರು ನೀರಿನ ಚೆಸ್ಟ್ನಟ್  ಬೇಯಿಸಿ ತಿನ್ನುತ್ತಾರೆ. ಇನ್ನು ಕೆಲವರು ಇದನ್ನು ಹಾಗೆ ತಿನ್ನುತ್ತಾರೆ. ಇದರ ಸೇವನೆಯಿಂದ ಅದೆಷ್ಟೋ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಚೆಸ್ಟ್ನಟ್ ನಲ್ಲಿ ಕಡಿಮೆ ಕ್ಯಾಲೊರಿ ಇದ್ದು ಇದು ಪ್ರೊಟೀನ್, ಪೊಟಾಶಿಯಮ್, ಕಾಪರ್, ವಿಟಮಿನ್ ಬಿ6 ಮತ್ತು ರೈಬೊಪ್ಲೊವಿನ್ ನಂತಹ ಪೋಷಕ ತತ್ವಗಳನ್ನು ಒಳಗೊಂಡಿದೆ.

ಚೆಸ್ಟ್ನಟ್ ನಲ್ಲಿರುವ ಹೆಚ್ಚಿನ ಪ್ರಮಾಣದ ಎಂಟಿ ಆಕ್ಸಿಡೆಂಟ್ ಶರೀರದಲ್ಲಿರುವ ಫ್ರೀ ರೆಡಿಕಲ್ಸ್ ನಂತಹ ಹಾನಿಕಾರಕ ಅಂಶಗಳನ್ನು ತೆಗೆದುಹಾಕಿ ಶರೀರವನ್ನು ಸುಸ್ಥಿತಿಯಲ್ಲಿಡುತ್ತದೆ. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ. ಇದು ಹೆಚ್ಚಿನ ಸಮಯದ ತನಕ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹಾಗಾಗಿ ಬೇಗ ಹಸಿವಾಗುವುದಿಲ್ಲ. ಇದರಿಂದ ತೂಕ ಕೂಡ ಇಳಿಯುತ್ತದೆ.

ಚೆಸ್ಟ್ನಟ್ ಗಳನ್ನು ತಿನ್ನುವುದರಿಂದ ದೀರ್ಘಕಾಲದ ಖಾಯಿಲೆ, ಹೃದ್ರೋಗ, ಟೈಪ್ 2 ಮಧುಮೇಹಗಳಂತಹ ರೋಗಗಳು ಗುಣವಾಗುತ್ತದೆ. ಈ ಹಣ್ಣು ವ್ಯಕ್ತಿಯ ಬ್ಲಡ್ ಪ್ರೆಶರ್ ಮತ್ತು ಕೊಲಾಸ್ಟ್ರಾಲ್ ನ ಪ್ರಮಾಣವನ್ನು ಸುಸ್ಥಿತಿಯಲ್ಲಿಡುತ್ತದೆ. ಇದರಲ್ಲಿರುವ ಪೊಟಾಶಿಯಮ್ ಹಾರ್ಟ್ ಅಟ್ಯಾಕ್ ಆಗುವ ಸಂಭವವನ್ನು ಕಡಿಮೆ ಮಾಡಿ ಹೃದಯದ ಖಾಯಿಲೆಯನ್ನು ಕಡಿಮೆಮಾಡುತ್ತದೆ. ಚೆಸ್ಟ್ ನಟ್ ಅನ್ನು ತಿನ್ನುವುದರಿಂದ ದಣಿವು, ನಿಶ್ಶಕ್ತಿ ಮುಂತಾದ ತೊಂದರೆಗಳು ದೂರವಾಗುತ್ತದೆ.

ಇದನ್ನು ಆರ್ದ್ರ ಅಥವಾ ಜವುಗು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಚೀನಿಯರ ಅಡುಗೆಯಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...