ಹೆಚ್ಚಿನವರು ಹಾಲು ಕುಡಿಯಲು ಇಷ್ಟಪಡ್ತಾರೆ. ಅದ್ರಲ್ಲಿರುವ ಪೌಷ್ಠಿಕ ಗುಣಗಳ ಬಗ್ಗೆ ಕೇಳಿದ ಜನರು ಪ್ರತಿನಿತ್ಯ ಹಾಲು ಸೇವನೆ ಮಾಡ್ತಾರೆ. ಕ್ಯಾಲ್ಸಿಯಂ, ಪ್ರೋಟೀನ್, ಪೋಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದ್ರಿಂದ ಅನೇಕ ರೋಗ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಬರಿ ಹಾಲು ಸೇವನೆ ಮಾಡುವುದಕ್ಕಿಂತ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದು ಬಹಳ ಒಳ್ಳೆಯದು.
ದಾಲ್ಚಿನಿ ಜೊತೆ ಹಾಲು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
ಜಾಯಿಕಾಯಿ ಹಾಗೂ ಹಾಲು ಸೇರಿಸಿ ಕುಡಿಯುವುದರಿಂದ ಚರ್ಮ ಹೊಳಪು ಪಡೆಯುತ್ತದೆ. ಇದ್ರಲ್ಲಿ ಫಾಸ್ಪರಸ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಆರೋಗ್ಯ ಸಂಬಂಧಿ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಕೀಲು ನೋವು ದೂರವಾಗುತ್ತದೆ. ಅನಿದ್ರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.
ಹಾಲಿನ ಜೊತೆ ಕೇಸರಿ ಬೆರೆಸಿ ಸೇವನೆ ಮಾಡುವುದು ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳ್ಳೆಯದು. ಗರ್ಭಿಣಿಯರು ಹಾಲಿಗೆ ಅರಿಶಿನ ಬೆರೆಸಿ ಸೇವನೆ ಮಾಡಬೇಕು.
ಏಲಕ್ಕಿಯಲ್ಲಿ ಪೋಟ್ಯಾಶಿಯಂ ಇರುತ್ತದೆ. ಇದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.
ತೂಕ ಇಳಿಸಿಕೊಳ್ಳಲು ಶುಂಠಿ ಬಹಳ ಒಳ್ಳೆಯದು. ಹಾಲಿನ ಜೊತೆ ಶುಂಠಿ ಸೇವನೆ ಮಾಡುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ.