alex Certify ಮಗುವಿನ ತಲೆಯೊಳಗೆ ಸಿಕ್ಕಿಕೊಂಡ ಪ್ರೆಶರ್ ಕುಕ್ಕರ್…! ಕಂದನ ಪಾಲಿಗೆ ಅಪತ್ಬಾಂಧವರಾದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ತಲೆಯೊಳಗೆ ಸಿಕ್ಕಿಕೊಂಡ ಪ್ರೆಶರ್ ಕುಕ್ಕರ್…! ಕಂದನ ಪಾಲಿಗೆ ಅಪತ್ಬಾಂಧವರಾದ ವೈದ್ಯರು

ಆಗ್ರಾ: ಆಟವಾಡುತ್ತಿದ್ದಾಗ ಪ್ರೆಶರ್ ಕುಕ್ಕರ್ ಒಳಗೆ ಮಗುವಿನ ತಲೆ ಸಿಕ್ಕಿಹಾಕಿಕೊಂಡ ಘಟನೆ ಆಗ್ರಾದ ಲೋಹಮಂಡಿ ಪ್ರದೇಶದ ಖತಿಪರದಲ್ಲಿ ಈ ಘಟನೆ ನಡೆದಿದೆ.

ಒಂದೂವರೆ ವರ್ಷದ ಬಾಲಕ ಆಟವಾಡುತ್ತಿದ್ದಾಗ ಆಕಸ್ಮಾತ್ ಆಗಿ ಕುಕ್ಕರ್ ಒಳಗೆ ತಲೆ ಸಿಲುಕಿಕೊಂಡಿದೆ. ಕುಕ್ಕರ್ ನಿಂದ ತಲೆಯನ್ನು ಹೊರತೆಗೆಯಲು ಕುಟುಂಬದ ಸದಸ್ಯರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರ ಕೂಡಲೇ ಎಸ್.ಎಂ. ಚಾರಿಟೇಬಲ್ ಆಸ್ಪತ್ರೆಗೆ ದೌಡಾಯಿಸಿದರು.

ವಂಚಕರಿಂದ ನಿಮ್ಮ ಹಣ ರಕ್ಷಿಸುವುದು ಹೇಗೆ…? ಬ್ಯಾಂಕ್ ನವರಂತೆ ಕರೆ ಮಾಡುವ ವಂಚಕರ ಬಗ್ಗೆ ಇಲ್ಲಿದೆ ಮಾಹಿತಿ

ಆಸ್ಪತ್ರೆಯ ವೈದ್ಯರಾದ ಡಾ. ಫರ್ಹತ್ ಖಾನ್ ಹಾಗೂ ತಂಡ ಸತತ ಎರಡು ಗಂಟೆಗಳ ಶ್ರಮದ ಬಳಿಕ ಮಗುವಿನ ತಲೆಯಿಂದ ಕುಕ್ಕರ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.

ಪರಿಸ್ಥಿತಿಯ ಸೂಕ್ಷ್ಮತೆ ಅರಿತ ವೈದ್ಯರು ಮೆಕ್ಯಾನಿಕ್ ರನ್ನು ಕರೆಸಿದ್ದಾರೆ. ಸುರಕ್ಷತಾ ನಿಯಮಗಳನ್ನು ಅನುಸರಿಸಿ ಅವರಲ್ಲಿದ್ದ ಗ್ರೈಂಡರ್ ಸಹಾಯದಿಂದ ಕುಕ್ಕರ್ ಅನ್ನು ಕತ್ತರಿಸುವ ಮುಖಾಂತರ ಮಗುವಿಗೆ ಕುಕ್ಕರ್ ನಿಂದ ಬಿಡುಗಡೆ ನೀಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...