ಕೊಪ್ಪಳ: ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಿದು. ಕಳ್ಳರನ್ನು ಹಿಡಿದು ಶಿಕ್ಷಿಸಬೇಕಾದ ಪೊಲೀಸರೇ ಡ್ಯೂಟಿ ವೇಳೆ ಕಳ್ಳತನ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಓರ್ವ ನೈಟ್ ಡ್ಯೂಟಿ ವೇಳೆ ಹಾಲಿನ ಪ್ಯಾಕೆಟ್ ಕದ್ದೊಯ್ದ ಘಟನೆ ಕೊಪ್ಪಳದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿಯ ಹಾಲಿನ ಡೈರಿ ಬಳಿ ನಡೆದಿದೆ.
ಹಾಲಿನ ಡೈರಿ ಬಳಿ ಇಟ್ಟಿದ್ದ ಕ್ರೇಟ್ ನಿಂದ ಹೆಡ್ ಕಾನ್ಸ್ ಟೇಬಲ್ ಹಾಲನ್ನು ಕದಿಯುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಾನಂದ್ ಹಾಲು ಕದ್ದ ಹೆಡ್ ಕಾನ್ಸ್ ತೇಬಲ್. ಡಿವೈಎಸ್ ಪಿ ಕಚೇರಿಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಬೈಕ್ ನಲ್ಲಿ ಬಂದ ಹೆಡ್ ಕಾನ್ಸ್ ಟೇಬಲ್ ಶಿವಾನಂದ, ಹಾಲಿನ ಡೈರಿ ಬಳಿ ಬೈಕ್ ನಿಲ್ಲಿಸಿ ಅತ್ತಿಂದಿತ್ತ ಓಡಾಡಿದ್ದಾರೆ. ಬಳಿಕ ಕ್ರೇಟ್ ನಿಂದ ಅರ್ಧ ಲೀಟರ್ ನ ಎರಡು ಪ್ಯಾಕೆಟ್ ಹಾಲನ್ನು ಕದ್ದು ತೆರಳಿದ್ದಾರೆ. ಆ.29ರಂದು ರತರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸಪ್ಪನೇ ಕಳ್ಳರಾದರೆ ಹೇಗೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.