ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ತಲೆ ಮತ್ತು ಕತ್ತಿನ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕಾರ್ಮಿಕರು ಮತ್ತು ತಂಬಾಕು ಸೇವನೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು ತೀವ್ರವಾಗಿದೆ. ಈ ಕ್ಯಾನ್ಸರ್‌ಗಳ ಪ್ರಮಾಣ ಒಟ್ಟಾರೆ ಪ್ರಕರಣಗಳಲ್ಲಿ ಶೇ.30ರಷ್ಟಿದೆ. 2040ರ ವೇಳೆಗೆ ಇದು ಶೇ.50ರಷ್ಟಾಗಬಹುದು ಎಂದು ಅಂದಾಜಿಸಲಾಗಿದೆ.
60 ಪ್ರತಿಶತದಷ್ಟು ಕಾರ್ಮಿಕರು ಯಾವುದಾದರೂ ರೂಪದಲ್ಲಿ ತಂಬಾಕನ್ನು ಸೇವಿಸುವುದರಿಂದ ಸಮಾಜದ ಈ ವಿಭಾಗವು ಹೆಚ್ಚಿನ ಅಪಾಯದಲ್ಲಿದೆ. ಆದ್ದರಿಂದ ಇದನ್ನು ತಡೆಗಟ್ಟಲು ರೋಗವನ್ನು ಮೊದಲೇ ಪತ್ತೆಹಚ್ಚುವುದು ಮುಖ್ಯ. ಶೇ.80ರಷ್ಟು ಕ್ಯಾನ್ಸರ್ ಪ್ರಕರಣಗಳನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಮಾಡಿದರೆ ಗುಣಪಡಿಸಬಹುದು.
ರೋಗಗಳನ್ನು ತ್ವರಿತವಾಗಿ ಪತ್ತೆ ಮಾಡುತ್ತದೆ AI
ರೋಗ ರೋಗನಿರ್ಣಯದಲ್ಲಿ AI ಮುಂಚೂಣಿಯಲ್ಲಿದೆ. AI ಅಲ್ಗಾರಿದಮ್‌ಗಳು ಕ್ಯಾನ್ಸರ್‌ನ ಮಾದರಿಗಳನ್ನು ಬಹುಬೇಗ ಗುರುತಿಸುತ್ತವೆ, ಇದು ರೋಗ ಪತ್ತೆಯ ನಿಖರತೆಯನ್ನು ಹೆಚ್ಚಿಸುತ್ತದೆ ಮತ್ತು ಸಮಯವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ರೋಗದ ಆರಂಭಿಕ ಪತ್ತೆ ಮತ್ತು ರೋಗಿಯ ಚೇತರಿಕೆಯ ಸಾಧ್ಯತೆಯಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು.
ಕ್ಯಾನ್ಸರ್‌ಗೆ ಪ್ರಮುಖ ಕಾರಣ ತಂಬಾಕು ಮತ್ತು ಧೂಮಪಾನ!
ತಲೆ ಮತ್ತು ಕತ್ತಿನ ಕ್ಯಾನ್ಸರ್ ಏಷ್ಯಾದ ಬಹುದೊಡ್ಡ ಸಮಸ್ಯೆ. ಇದು ಬಡವರ ಕಾಯಿಲೆಯಾಗಿದ್ದು, ಇದಕ್ಕೆ ಮುಖ್ಯ ಕಾರಣ ಹೊಗೆರಹಿತ ತಂಬಾಕು ಸೇವನೆ ಮತ್ತು ಧೂಮಪಾನ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ.
ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಆರೈಕೆಯಲ್ಲಿ AI ಅನ್ನು ಬಳಸಲಾಗ್ತಿದೆ. ಇದರ ಹೊರತಾಗಿ ಇಂಡಿಯನ್ ಸರ್ಜಿಕಲ್ ರೋಬೋಟ್, SSIನಂಹತ ಗಮನಾರ್ಹ ಆವಿಷ್ಕಾರಗಳು ಕೂಡ ಮುಂಚೂಣಿಗೆ ಬರುತ್ತಿವೆ.