ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವಾಗದ ರಸೆಲ್ ಕಮ್ಮರ್ ಇದೀಗ ಗೋಲ್ಡ್ಮನ್ ಸ್ಯಾಚ್ ಕಂಪನಿಯಲ್ಲಿ ಕ್ರೆಡಿಟ್ ಟ್ರೇಡರ್ ಆಗುವ ಮೂಲಕ ತಮ್ಮ ಛಲವನ್ನು ಸಾಧಿಸಿ ತೋರಿಸಿದ್ದಾರೆ.
ಇದು ಜಪಾನ್‌ನಲ್ಲಿ ಸಾಮಾನ್ಯ ಕಥೆಯಾಗಿದೆ, ವಿಶೇಷವಾಗಿ ಕ್ರೆಡಿಟ್ ಇತಿಹಾಸವಿಲ್ಲದ ಯುವಕರಿಗೆ. ಕಮ್ಮರ್ ಪ್ರತಿಕ್ರಿಯೆಯು ಅಸಾಮಾನ್ಯವಾಗಿತ್ತು: ಜನರಿಗೆ ಕ್ರೆಡಿಟ್ ಕಾರ್ಡ್‌ಗಳಿಗೆ ಪರ್ಯಾಯ ಸೇವೆಯನ್ನು ನೀಡಲು ಅವರು ವ್ಯಾಪಾರವನ್ನು ರೂಪಿಸಿದರು.
ಜಪಾನ್‌ನಲ್ಲಿ ಈ ರೀತಿಯ ಕ್ರೆಡಿಟ್ ಕಾರ್ಡ್ ಹೊಂದಿರದ ಯುವಕರ ಕತೆ ಸಾಮಾನ್ಯ. ಆದರೆ ರಸೆಲ್ ಕತೆ ಮಾತ್ರ ಇವೆಲ್ಲಕ್ಕಿಂತ ವಿಭಿನ್ನವಾಗಿದೆ. ಕ್ರೆಡಿಟ್ ಕಾರ್ಡ್ ಪಡೆಯಲು ಆಗದ ರಸೆಲ್ ಇದೀಗ ಬೇರೆಯವರಿಗೆ ಕ್ರೆಡಿಟ್ ಕಾರ್ಡ್ಗೆ ಸಮನಾದ ಸೌಕರ್ಯವನ್ನು ನೀಡಲು ಮುಂದಾಗಿದ್ದಾರೆ.
ಅಡುಗೆ ಮನೆಯಲ್ಲಿ ಇಂಥಾ ವಸ್ತುಗಳು ಬೇಡವೇ ಬೇಡ
ಈ ವಿಚಾರವಾಗಿ ಮಾತನಾಡಿದ ರಸೆಲ್, ಜಪಾನ್‌ನಲ್ಲಿ ಮೊದಲ ಕ್ರೆಡಿಟ್ ಕಾರ್ಡ್ ಪಡೆಯುವುದು ತುಂಬಾನೇ ಕಷ್ಟಕರವಾಗಿತ್ತು. ಹೀಗಾಗಿ ನಾವು ಯಾರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದಿಲ್ಲವೋ ಅಂತವರಿಗೆ ಕ್ರೆಡಿಟ್ ಕಾರ್ಡ್ಗೆ ಸಮನಾದ ವ್ಯವಸ್ಥೆಯನ್ನು ನೀಡಲು ಆರಂಭಿಸಿದೆವು ಎಂದು ಹೇಳಿದ್ದಾರೆ.
ಯೂನಿಕಾರ್ನ್ ಬೈ ನೌ, ಪೇ ಲೇಟರ್( ಬಿಎಲ್ಪಿಎಲ್) ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಪ್ರಚಾರವನ್ನು ಪಡೆದಿದೆ. ಶೂನ್ಯ ಬಡ್ಡಿದರದ ಈ ಸೌಲಭ್ಯವು ಯುವ ಜನಾಂಗಕ್ಕೆ ವರದಾನವಾಗಿ ಬದಲಾಗಿದೆ.