alex Certify ಕೇಕ್ ಮೇಲೆ ಹೀಗೊಂದು ಅಚ್ಚರಿಯ ಶುಭಾಶಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಕ್ ಮೇಲೆ ಹೀಗೊಂದು ಅಚ್ಚರಿಯ ಶುಭಾಶಯ

ಒಂದು ಪದದಿಂದ ಏನೆಲ್ಲಾ ಅವಾಂತರಗಳಾಗುತ್ತವೆ/ ಅಪಾರ್ಥಗಳಾಗುತ್ತವೆ ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಕೆಲವೊಮ್ಮೆ ಅಪಾರ್ಥಗಳು ಮುಜುಗರ ಉಂಟು ಮಾಡಿದರೆ, ಇನ್ನೂ ಕೆಲವೊಮ್ಮೆ ಆಕ್ರೋಶಕ್ಕೂ, ತಮಾಷೆಯಾಗಿಯೂ ಪರಿಣಮಿಸುತ್ತವೆ.
ಅದೇ ರೀತಿಯಲ್ಲಿ ನಾಗ್ಪುರದಲ್ಲೊಂದು ಪ್ರಕರಣ ನಡೆದಿದೆ.

ಅಲ್ಲಿನ ನಾಗರಿಕ ಕಪಿಲ್ ವಾಸ್ನಿಕ್ ಎಂಬುವರು ಸ್ವಿಗ್ಗಿಯ ಮೂಲಕ ಅಲ್ಲಿನ ಜನಪ್ರಿಯ ಬೇಕರಿಯಿಂದ ಕೇಕ್ ಗೆ ಆರ್ಡರ್ ಮಾಡಿದ್ದಾರೆ. ಆ ಕೇಕ್ ನಲ್ಲಿ ಮೊಟ್ಟೆ ಇದೆಯೇ ಇಲ್ಲವೋ (“Please mention if the cake contains egg”) ಎಂಬುದನ್ನು ತಿಳಿಸಿ ಎಂದು ಕೇಳಿದ್ದಾರೆ. ಸಾಮಾನ್ಯವಾಗಿ ಸಂಭ್ರಮಾಚರಣೆಗೆ ಕೇಕ್ ಗಳನ್ನು ಆರ್ಡರ್ ಮಾಡಲಾಗುತ್ತದೆ ಮತ್ತು ವಾರ್ಷಿಕೋತ್ಸವ/ಹುಟ್ಟುಹಬ್ಬ ಹೀಗೆಲ್ಲಾ ಕೇಕ್ ಮೇಲೆ ಬರೆಸಲಾಗುತ್ತದೆ. ಇಲ್ಲಿಯೇ ಎಡವಟ್ಟಾಗಿರೋದು.

ಕೇಕ್ ನಲ್ಲಿ ಮೊಟ್ಟೆ ಇದೆಯೋ ಇಲ್ಲವೋ ತಿಳಿಸಿ ಎಂದು ಗ್ರಾಹಕ ಕೇಳಿ ಮಾಡಿದ್ದ ಟೆಕ್ಸ್ಟ್ ಅನ್ನೇ ಕೇಕ್ ಮೇಲೆ ಬರೆಯಬೇಕೆಂದು ಭಾವಿಸಿ ಬೇಕರಿಯ ಮಹಾಶಯ ‘Contain Egg’ ಎಂದು ಬರೆದೇ ಬಿಟ್ಟಿದ್ದ!

ಮತ್ತೆ ಐಸಿಯುಗೆ ದಾಖಲಾದ ಆಸಿಡ್ ದಾಳಿ ಸಂತ್ರಸ್ತೆ

ಸ್ವಿಗ್ಗಿಯವನು ತಂದ ಬಾಕ್ಸ್ ಓಪನ್ ಮಾಡಿದಾಗ ವಾಸ್ನಿಕ್ ಗೆ ಈ ಆಶ್ಚರ್ಯ ಕಾದಿತ್ತು. ಕೇಕ್ ಮೇಲೆ ‘Contain Egg’ ಎಂದು ಬರೆಯಲಾಗಿತ್ತು. ಇದನ್ನು ಕಂಡು ತಲೆ ಚಚ್ಚಿಕೊಂಡ ವಾಸ್ನಿಕ್ ಎಂತಹ ಬೃಹಸ್ಪತಿ ಬೇಕರಿಯವನು ಎಂದು ತಮಗೆ ತಾವೇ ಶಪಿಸಿಕೊಂಡರು. ಈ ಕೇಕ್ ಅನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ವಾಸ್ನಿಕ್ ತಾವು ಬೇಸ್ತು ಬಿದ್ದ ಬಗೆಯನ್ನು ಹೇಳಿಕೊಂಡಿದ್ದಾರೆ.

ಇವರ ಟ್ವಿಟ್ಟರ್ ಅನ್ನು ನೋಡಿದ ನೆಟ್ಟಿಗರು ತಮಗೂ ಆಗಿದ್ದ ಇಂತಹ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು, ನಾನೊಮ್ಮೆ ಹುಟ್ಟುಹಬ್ಬಕ್ಕೆಂದು ಕೇಕ್ ಗೆ ಆರ್ಡರ್ ಮಾಡಿದ್ದೆ. ಅದರಲ್ಲಿ ‘Don’t send cutlery’ ಎಂದು ಬರೆದು ಕಳುಹಿಸುವ ಮೂಲಕ ಬೇಕರಿಯವನು ನಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದ್ದ ಎಂದು ಹೇಳಿಕೊಂಡಿದ್ದಾರೆ.

ಅದೇ ರೀತಿ, ಆನ್ಲೈನ್ ನಲ್ಲಿ ಆರ್ಡರ್ ಮಾಡುವಾಗ ಏನಾದರೂ ಸಂದೇಶವಿದೆಯೇ ಎಂಬ ಕಾಲಂನಲ್ಲಿ NIL ಎಂದು ನಮೂದಿಸಿದ್ದೆ. ಕೇಕ್ ಮಾಡುವವನು ಇದನ್ನೇ ಸಂದೇಶವೆಂದು ತಿಳಿದುಕೊಂಡು ಕೇಕ್ ಮೇಲೆ NIL ಎಂದು ಬರೆದು ಕಳುಹಿಸಿದ್ದ ಎಂದು ಮತ್ತೋರ್ವ ನೆಟ್ಟಿಗ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...