
ಮಹಾರಾಜ ಟ್ರೋಫಿಯ ಎಲ್ಲಾ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು ಕರ್ನಾಟಕದ ಯುವ ಪ್ರತಿಭೆಗಳು ಈ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕ ಲೀಗ್ ಮಾತ್ರವಲ್ಲದೆ ತಮಿಳುನಾಡು ಪ್ರೀಮಿಯರ್ ಲೀಗ್ ಆಂಧ್ರ ಪ್ರೀಮಿಯರ್ ಲೀಗ್ ನಲ್ಲಿ ಮಿಂಚಿ ಸಾಕಷ್ಟು ಆಟಗಾರರು ಐಪಿಎಲ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಒಟ್ಟಾರೆ 30 ಪಂದ್ಯಗಳು ನಡೆಯಲಿದ್ದು, ಆಗಸ್ಟ್ 28ಕ್ಕೆ ಸೆಮಿ ಫೈನಲ್ ಶುರುವಾಗಲಿದೆ.
ಈ ಬಾರಿ ಮಹಾರಾಜ ಟ್ರೋಪಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿ ಇಂತಿದೆ
ಬೌಲರ್ ಪಂದ್ಯ ವಿಕೆಟ್
ಅಭಿಲಾಷ್ ಶೆಟ್ಟಿ 5 12
ಮನ್ವಂತ್ ಕುಮಾರ್ 5 10
ಶುಭಂಗ್ ಹೆಗ್ಡೆ 5 8
ಪ್ರವೀಣ್ ದುಬೆ 5 7
ನವೀನ್ ಎಂಜಿ 5 7