
ಪ್ರೀತಿ – ಪ್ರೇಮ ಇವೆಲ್ಲ ಎಲ್ಲರಿಂದಲೂ ಆಗೋ ಕಾರ್ಯವಲ್ಲ. ಅದರಲ್ಲೂ ಪೋಷಕರಿಗೆ ನಿಮ್ಮ ಪ್ರೇಮಿಗಳನ್ನ ಪರಿಚಯ ಮಾಡಿಸಿದರಂತೂ ಆ ಸಂಬಂಧದಲ್ಲಿ ಇನ್ನಷ್ಟು ಟ್ವಿಸ್ಟ್ ಬರೋದ್ರಲ್ಲಿ ಡೌಟ್ ಇಲ್ಲ. ಅದೇ ರೀತಿ ಇಲ್ಲೊಬ್ಬಳು ಪ್ರಿಯತಮೆ ತನ್ನ ಪ್ರಿಯತಮನ ತಾಯಿ ಹಾಕಿರುವ ಷರತ್ತುಗಳನ್ನ ಟಿಕ್ಟಾಕ್ ನಲ್ಲಿ ಶೇರ್ ಮಾಡಿದ್ದು ಇದನ್ನ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಟಿಕ್ಟಾಕ್ನಲ್ಲಿ ಎಮ್ಮಾ ಎಂಬಾಕೆ ತನ್ನ ಬಾಯ್ಫ್ರೆಂಡ್ ತಾಯಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರೂಲ್ಸ್ನ್ನು ಶೇರ್ ಮಾಡಿದ್ದಾರೆ.
ಇದರಲ್ಲಿ ತನ್ನ ಪುತ್ರನ ಗರ್ಲ್ಫ್ರೆಂಡ್ಗೆ ತಾಯಿ 10 ಷರತ್ತುಗಳನ್ನ ವಿಧಿಸಿದ್ದಾಳೆ. ಆತ ನಿನ್ನ ಎಟಿಎಂ ಕಾರ್ಡ್ ಅಲ್ಲ ಅನ್ನೋದರ ಮೂಲಕ ರೂಲ್ಸ್ ಆರಂಭವಾಗುತ್ತೆ.
ನೀನು ತುಂಡುಡುಗೆ ಧರಿಸಿ ಮನೆಗೆ ಬಂದರೆ ನಿನ್ನನ್ನ ಆತನಿಂದ ದೂರ ಮಾಡುತ್ತೇನೆ. ನನ್ನ ಪುತ್ರನ ಮೊಬೈಲ್ನಲ್ಲಿ ಯಾವುದೇ ಸೆಕ್ಸ್ ಚಾಟ್ಗಳು ಕಂಡರೂ ಸಹ ನಿಮ್ಮಿಬ್ಬರನ್ನ ದೂರ ಮಾಡುತ್ತೇನೆ. ನನಗೆ ನೀನು ಇಷ್ಟವಾಗಿಲ್ಲ ಎಂದರೂ ಸಹ ನಿನ್ನನ್ನ ನನ್ನ ಪುತ್ರನೊಡನೇ ಡೇಟಿಂಗ್ ಮಾಡಲು ನಾನು ಬಿಡೋದಿಲ್ಲ. ನನ್ನ ಮಗನನ್ನ ಜೆಂಟಲ್ಮ್ಯಾನ್ನಂತೆ ಸಾಕಿದ್ದೇನೆ. ಹೀಗಾಗಿ ನೀನು ಸಹ ಪ್ರಬುದ್ಧಳಂತೆ ವರ್ತಿಸು. ಇದೆಲ್ಲವನ್ನೂ ಮೀರಿ ನೀನು ಆತನಿಗೆ ಮೋಸ ಮಾಡಿದ್ದಲ್ಲಿ ನಿನ್ನ ಬಾಯ್ಫ್ರೆಂಡ್ಗಿಂತ ಆತನ ತಾಯಿ ಇನ್ನೂ ಕೆಟ್ಟವಳಾಗ್ತಾಳೆ ಅನ್ನೋದನ್ನ ನೆನಪಿನಲ್ಲಿ ಇಡು. ನಾನು ನಿನ್ನ ಬಾಯ್ಫ್ರೆಂಡ್ ತಾಯಿಗಿಂತ ಹೆಚ್ಚಾಗಿ ನಿನ್ನ ಅತ್ತೆಯಂತೆ ವರ್ತಿಸುತ್ತೇನೆ ಎಂದು ಬರೆಯಲಾಗಿದೆ.
ಈ ನಿಯಮಗಳ ನೋಡಿದ ನೆಟ್ಟಿಗರು ನೀನು ನಿನ್ನ ಬಾಯ್ ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಳ್ಳೋದೇ ಒಳಿತು ಎಂದು ಸಲಹೆ ನೀಡಿದ್ದಾರೆ .