alex Certify BREAKING : ‘ಪೆನ್ ಡ್ರೈವ್’ ಹಿಡಿದು ಸದನಕ್ಕೆ ಆಗಮಿಸಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಪೆನ್ ಡ್ರೈವ್’ ಹಿಡಿದು ಸದನಕ್ಕೆ ಆಗಮಿಸಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ HDK

ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇದೀಗ ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದಾರೆ.

ಪೆನ್ ಡ್ರೈವ್ ಹಿಡಿದೇ ಸದನಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ವರ್ಗಾವಣೆ ದಂಧೆ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವರ್ಗಾವಣೆ ದಂಧೆಯ ದಾಖಲೆ ಈ ಪೆನ್ ಡ್ರೈವ್ ನಲ್ಲಿದೆ. ಆಡಿಯೋ ದಾಖಲೆಗಳು ಇದರಲ್ಲಿವೆ. ಸಮಯ ಬಂದಾಗ ಪೆನ್ ಡ್ರೈವ್ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ನಾನೇನು ಕೆ ಎಸ್ ಟಿ ಟ್ಯಾಕ್ಸ್ ಅಂತ ಇಟ್ಟುಕೊಂಡಿದ್ನಾ? ತಾಜ್ ವೆಸ್ಟ್ ಎಂಡ್ ಬಿಲ್ ನ್ನು ಕಾಂಗ್ರೆಸ್ ನವರಿಗೇನಾದ್ರೂ ಕಳುಹಿಸಿದ್ರಾ? ನಾನೇನು ಬೀದಿಯಲ್ಲಿ ಹೋಗುವವನಾ? 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ನನ್ನ ಆಸ್ತಿ ಬಗ್ಗೆಯೂ ಸರ್ಕಾರ ತನಿಖೆಯನ್ನು ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...