alex Certify ಗ್ರಾಹಕರಿಗೆ 10 ಲಕ್ಷ ರೂ. ವರೆಗೆ ನಗದು ನೀಡ್ತಿದೆ ಈ ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ 10 ಲಕ್ಷ ರೂ. ವರೆಗೆ ನಗದು ನೀಡ್ತಿದೆ ಈ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆ ಹೊಂದಿರುವ ಗ್ರಾಹಕರಿಗೆ ಉತ್ತಮ ಸುದ್ದಿಯೊಂದಿದೆ. ವ್ಯವಹಾರಕ್ಕೆ  ನಗದು ಅಗತ್ಯವಿದ್ದರೆ, ಯಾವುದೇ ಪುರಾವೆ ನೀಡದೆ 10 ಲಕ್ಷ ರೂಪಾಯಿವರೆಗೆ ನಗದು ಪಡೆಯಬಹುದು. ಇದಕ್ಕಾಗಿ ಕೇವಲ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕು. ಚಿಲ್ಲರೆ ವ್ಯಾಪಾರಿಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಈ ವಿಶೇಷ ಸೌಲಭ್ಯವನ್ನು ಶುರು ಮಾಡಿದೆ.

ಕೊರೊನಾ ಬಿಕ್ಕಟ್ಟಿನಲ್ಲಿ ಹಣದ ಕೊರತೆಯಿಂದಾಗಿ ಅನೇಕ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ವಿಶೇಷ ಸೌಲಭ್ಯಕ್ಕಾಗಿ ಬ್ಯಾಂಕ್ ಸಿಎಸ್ಸಿ ಎಸ್‌ಪಿವಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಬ್ಯಾಂಕ್ ಈ ಯೋಜನೆಗೆ ಓವರ್‌ಡ್ರಾಫ್ಟ್ ಯೋಜನೆ ಎಂದು ಹೆಸರಿಟ್ಟಿದೆ. ನಗದು ಬಿಕ್ಕಟ್ಟು ಎದುರಿಸುತ್ತಿರುವ ಗ್ರಾಹಕರಿಗೆ ಈ ಸೌಲಭ್ಯದ ಲಾಭ ಸಿಗಲಿದೆ.

ಕಳೆದ 3 ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಚಿಲ್ಲರೆ ವ್ಯಾಪಾರಿಗಳಿಗೆ ಬ್ಯಾಂಕ್ ನ ಓವರ್‌ಡ್ರಾಫ್ಟ್ ಯೋಜನೆಯ ಲಾಭ ಸಿಗಲಿದೆ. ಕನಿಷ್ಟ 50,000 ಮತ್ತು ಗರಿಷ್ಠ 10 ಲಕ್ಷ ರೂಪಾಯಿ ನಗದು ಪಡೆಯಬಹುದು. ಗ್ರಾಮೀಣ ಪ್ರದೇಶದ ಚಿಲ್ಲರೆ ವ್ಯಾಪಾರಿಗಳು, ಅಂಗಡಿಯವರು ಮತ್ತು ಉದ್ಯಮಿಗಳು ಈ ಸೌಲಭ್ಯದ ಲಾಭವನ್ನು ಪಡೆಯಬಹುದು ಎಂದು ಬ್ಯಾಂಕ್ ಹೇಳಿದೆ.

ಕಡಿಮೆ ಸಮಯದಲ್ಲಿ ಗ್ರಾಹಕರಿಗೆ ಹಣಕಾಸಿನ ನೆರವು ಸಿಗಲಿದೆ. ಇದಕ್ಕಾಗಿ ಹೆಚ್ಚಿನ ದಾಖಲೆಗಳನ್ನು ಬ್ಯಾಂಕ್ ಗೆ ನೀಡಬೇಕಾಗಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...