ಕಳ್ಳತನಕ್ಕೆಂದು ಬಂದ ಕಳ್ಳ ಮಾಡಿದ್ದ ಎಡವಟ್ಟಿನಿಂದಾಗಿ ಎಟಿಎಂ ಮಷಿನ್ನಲ್ಲಿದ್ದ ಲಕ್ಷ, ಲಕ್ಷ ಮೌಲ್ಯದ ಗರಿಗರಿ ನೋಟುಗಳು ಬೂದಿಯಾಗಿವೆ. ಈ ಘಟನೆ ನಡೆದಿದ್ದು ಪುಣೆಯ ಪಿಂಪರಿಯ ಚಿಂಚವಾಡದಲ್ಲಿ.
ಅಂದು ರವಿವಾರ, ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳೆಲ್ಲ ರಜಾ ಇದ್ದುದರಿಂದ ಆ ದಿನ ಕೊಂಚ ಜನರ ಓಡಾಟ ಕಡಿಮೆ ಇತ್ತು. ಅದೇ ದಿನ ಮಧ್ಯಾಹ್ನದ ಸಮಯದಂದು ಬಂದ ಕಳ್ಳನೊಬ್ಬ ಅಲ್ಲೇ ಇದ್ದ ಅಟೋಮೆಟೆಡ್ ಟೆಲ್ಲರ್ ಮಷಿನ್ ನಲ್ಲಿ ಇದ್ದ ಹಣವನ್ನೆಲ್ಲ ಲೂಟಿ ಮಾಡೋದಕ್ಕೆ ಪ್ಲಾನ್ ಮಾಡಿದ್ದಾನೆ. ಅದಕ್ಕಾಗಿ ಆತ ಏನ್ ಮಾಡಿದ್ದ ಅಂತ ಗೊತ್ತಾದ್ರೆ ಬೆಚ್ಚಿಬೀಳ್ತಿರಾ.
ಪೊಲೀಸರು ಕೊಟ್ಟ ಮಾಹಿತಿ ಪ್ರಕಾರ ಹೆಚ್ಡಿಎಫ್ಸಿ ಬ್ಯಾಂಕ್ನ ಎಟಿಎಂ ಮಷಿನ್ ಒಳಗಿದ್ದ ದುಡ್ಡನ್ನ ಲೂಟಿ ಮಾಡೋದಕ್ಕೆ ಆ ಕಳ್ಳ ಗ್ಯಾಸ್ ಕಟರ್ನ ಯೂಸ್ ಮಾಡಿದ್ದ. ಅದಕ್ಕೂ ಮುಂಚೆ ಆತ ಅಲ್ಲಿದ್ದ ಸಿಸಿ ಟಿವಿ ಕ್ಯಾಮರಾಗೆ ಕಪ್ಪು ಪೇಂಟ್ ಬಳಿದಿದ್ದಾನೆ. ಪೊಲೀಸರಿಗೆ ಯಾವುದೇ ಸಾಕ್ಷಿ ಸಿಗಬಾರದು ಅನ್ನೊ ಉದ್ದೇಶ ಆತನದ್ದಾಗಿತ್ತು. ಬಣ್ಣ ಬಳಿದ ನಂತರ ಗ್ಯಾಸ್ ಕಟರ್ ನಿಂದ ಎಟಿಎಮ್ ಮಷಿನ್ ಬಾಗಿಲು ಒಡೆಯೊದಕ್ಕೆ ಪ್ರಯತ್ನ ಪಟ್ಟಿದ್ದಾನೆ. ಆದರೆ ಏಕಾಏಕಿ ಮಷಿನ್ಗೆ ಬೆಂಕಿ ಹೊತ್ತಿಕೊಂಡಿದೆ. ಒಮ್ಮಿಂದೊಮ್ಮೆ ಬೆಂಕಿ ಆವರಿಸಿಕೊಂಡಿದ್ದರಿಂದ ಎಟಿಎಂ ಮಷಿನ್ ಒಳಗಿದ್ದ ಕಳ್ಳ ಹೆದರಿಕೊಂಡು ಹೊರಗೆ ಓಡಿ ಬಂದಿದ್ಧಾನೆ. ಆದರೆ ಅಷ್ಟು ಹೊತ್ತಿಗೆ ಎಟಿಎಂ ಮಷಿನ್ ಒಳಗಿದ್ದ 3.98 ಲಕ್ಷ ರೂಪಾಯಿ ನೋಟುಗಳು ಧಗಧಗನೆ ಹೊತ್ತಿ ಉರಿದು ಬೂದಿಯಾಗಿದೆ.
ತಕ್ಷಣವೇ ಬ್ಯಾಂಕ್ ಅಧಿಕಾರಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈಗ ಕಳ್ಳನ ವಿರುದ್ಧ ಐಪಿಸಿ ಸೆಕ್ಷನ್ ಸಾರ್ವಜನಿಕ ಸಂಪತ್ತನ್ನ ಹಾನಿಗೊಳಿಸಿರುವುದಕ್ಕಾಗಿ ಕೇಸ್ ದಾಖಲು ಮಾಡಲಾಗಿದೆ. ಸದ್ಯಕ್ಕೆ ಪೊಲೀಸರು ಕಳ್ಳನ ಹುಡುಕಾಟದಲ್ಲಿದ್ದು, ಆದಷ್ಟು ಬೇಗ ಆತನನ್ನ ಹಿಡಿಯುವುದಾಗಿ ಪೊಲೀಸರು ಹೇಳಿದ್ದಾರೆ.