alex Certify ದಾಖಲೆಗೆ ಪಾತ್ರವಾಯ್ತು ಹೆಚ್.ಡಿ. ಕುಮಾರಸ್ವಾಮಿಗೆ ಅಭಿಮಾನಿಗಳು ಹಾಕಿದ 500 ವಿಭಿನ್ನ ಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆಗೆ ಪಾತ್ರವಾಯ್ತು ಹೆಚ್.ಡಿ. ಕುಮಾರಸ್ವಾಮಿಗೆ ಅಭಿಮಾನಿಗಳು ಹಾಕಿದ 500 ವಿಭಿನ್ನ ಹಾರ

ತುಮಕೂರು: ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೈಗೊಂಡಿರುವ ‘ಪಂಚರತ್ನ’ ರಥಯಾತ್ರೆ ವೇಳೆ 500 ಬಗೆಯ ಹಾರಗಳನ್ನು ಅಭಿಮಾನಿಗಳು ಹಾಕಿದ್ದಾರೆ.

ಇದು ಏಷ್ಯಾ ಬುಕ್ ದಾಖಲೆ ಸೇರ್ಪಡೆಯಾಗಿದೆ. 500 ಬಗೆಯ ಹಾರಗಳನ್ನು ಅಭಿಮಾನಿಗಳು ಹಾಕಿದ್ದು, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗಳ ಅಧಿಕಾರಿಗಳು ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಿದ್ದ ಸ್ಥಳಕ್ಕೆ ಆಗಮಿಸಿ ದಾಖಲೆ ಪತ್ರ ಮತ್ತು ಪದಕಗಳನ್ನು ಹಸ್ತಾಂತರ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಇದು ನನಗೆ ಆಶ್ಚರ್ಯದ ಗೌರವವಾಗಿದ್ದು, ಈ ದಾಖಲೆಗಳನ್ನು ನಾಡಿನ ರೈತರು ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...