ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದದ ಸಂಬಂಧ ವಿಚಾರಣೆ ನಡೆಸಿದ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಒಂದೇ ಕುಟುಂಬದ ಮೂವರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ವಸತಿ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಸೂಚನೆ ನೀಡಿದೆ. ಇದರಿಂದ ಬೀದಿ ನಾಯಿಗಳು ಆ ಸ್ಥಳದಲ್ಲಿ ಹೆಚ್ಚೆಚ್ಚು ಓಡಾಡುತ್ತವೆ ಎಂದು ಹೇಳಿದೆ.
ಬಲಬೀರ್ ಕೌರ್ ಎಂಬವರ ದೂರನ್ನು ಆಧರಿಸಿ ಅರ್ಜಿದಾರ ಮನದೀಪ್ ಸಿಂಗ್, ಅವರ ಪತ್ನಿ ಹಾಗೂ ಪುತ್ರಿ ಲವಪ್ರೀತ್ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಕಪೂರ್ಥಲಾ ಜಿಲ್ಲೆಯ ಫಗವಾಡಾದ ಸತನಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..!
ಬಲಬೀರ್ ಕೌರ್ ದೂರಿನ ಪ್ರಕಾರ ಆರೋಪಿ ಮನದೀಪ್ ಸಿಂಗ್ 8-9 ಬೀದಿ ನಾಯಿಗಳನ್ನು ಸಾಕಿದ್ದಾರೆ. ಇವು ರಸ್ತೆಯಲ್ಲಿ ಗಲೀಜು ಮಾಡುತ್ತವೆ . ಈ ಬಗ್ಗೆ ಗ್ರಾಮದ ಅನೇಕರು ಪರಿವಾರದ ಬಳಿ ಹೇಳಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದ್ದರು.
ಇದು ಮಾತ್ರವಲ್ಲದೇ ಬೀದಿ ನಾಯಿಗಳು ತಾವು ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ನಾಶ ಮಾಡಿವೆ. ಹಾಗೂ 2019ರ ನವೆಂಬರ್ 24ರಂದು ಬಲಬೀರ್ ಹಾಗೂ ಲವಲೀನ್ ನಮ್ಮ ಮನೆಯ ಮುಂದೆ ಬಂದು ಹಲ್ಲೆ ನಡೆಸಿದ್ದಾರೆ ಹಾಗೂ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.
SHOCKING VIDEO: ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಜೀಪ್ ನುಗ್ಗಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆ, ವಿಡಿಯೋ ವೈರಲ್
ಆರೋಪಿ ಕುಟುಂಬಕ್ಕೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್, ಬೀದಿ ನಾಯಿಗಳಿಗೆ ವಸತಿ ಪ್ರದೇಶಗಳಲ್ಲಿ ಆಹಾರ ನೀಡದಂತೆ ಆರೋಪಿ ಕುಟುಂಬಕ್ಕೆ ಖಡಕ್ ಸೂಚನೆ ನೀಡಿದೆ. ಆಹಾರ ಸಿಗುವ ಜಾಗದಲ್ಲಿ ಶ್ವಾನಗಳು ಹೆಚ್ಚು ಓಡಾಡುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗೆ ಆಹಾರ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.