alex Certify ಕಳೆದೊಂದು ವರ್ಷದಿಂದ ಸಿಬ್ಬಂದಿಗೆ ಸಂಬಳವನ್ನೇ ನೀಡಿಲ್ಲ ಈ ಪ್ರಸಿದ್ದ ಕಾಫಿ ಹೌಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳೆದೊಂದು ವರ್ಷದಿಂದ ಸಿಬ್ಬಂದಿಗೆ ಸಂಬಳವನ್ನೇ ನೀಡಿಲ್ಲ ಈ ಪ್ರಸಿದ್ದ ಕಾಫಿ ಹೌಸ್….!

ಶಿಮ್ಲಾದ ಮಾಲ್​ ರಸ್ತೆಯಲ್ಲಿರುವ ಐಕಾನಿಕ್​ ಇಂಡಿಯನ್​ ಕಾಫಿ ಹೌಸ್​​ ಬಹುತೇಕ ಎಲ್ಲಾ ರಾಜಕಾರಣಿಗಳು ಸೆಲೆಬ್ರಿಟಿಗಳಿಗಳ ಹಾಟ್​ ಫೇವರಿಟ್ ತಾಣ.

ಕೊರೊನಾದ ಬಿಸಿ ಈ ಪ್ರಸಿದ್ಧ ಕಾಫಿ ಹೌಸ್​ಗೂ ತಟ್ಟಿದ್ದು ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಮೊಟ್ಟ ಮೊದಲ ಇಂಡಿಯನ್ ಕಾಫಿ ಹೌಸ್​ನ ಶಾಖೆ ಆರಂಭವಾಗಿದ್ದು ದೆಹಲಿಯಲ್ಲಿ. 1957ರ ಅಕ್ಟೋಬರ್​ 27ರಂದು ಮೊದಲ ಶಾಖೆ ಆರಂಭವಾಗಿತ್ತು. ಇದಾಗಿ ಐದು ವರ್ಷಗಳ ಬಳಿಕ ಅಂದರೆ 1962ರಲ್ಲಿ ಶಿಮ್ಲಾದಲ್ಲಿ ಈ ಕೆಫೆ ತೆರೆದಿತ್ತು. ಶಿಮ್ಲಾದ ಈ ಪ್ರಸಿದ್ಧ ಕಾಫಿ ಕೆಫೆಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹಾಗೂ ಅಡ್ವಾಣಿಯಂತಹ ಗಣ್ಯರು ಕಾಫಿ ಸವಿದಿದ್ದಾರೆ. ಅಲ್ಲದೇ 2017ರಲ್ಲಿ ಪ್ರಧಾನಿ ಮೋದಿ ಸಹ ಈ ಐಕಾನಿಕ್​ ಕೆಫೆಗೆ ಭೇಟಿ ನೀಡಿದ್ದರು. ಆದರೆ ಇದೀಗ ಈ ಕಾಫಿ ಕೆಫೆ ತೀವ್ರ ನಷ್ಟ ಅನುಭವಿಸುತ್ತಿದ್ದು ಕಳೆದ 10 ತಿಂಗಳಿನಿಂದ ಸಿಬ್ಬಂದಿಗೆ ಸಂಬಳ ನೀಡಲೂ ಆಗುತ್ತಿಲ್ಲ ಎಂದು ಕೆಫೆ ಮಾಲೀಕ ಹೇಳಿದ್ದಾರೆ.

ಇಂಡಿಯನ್​ ಕಾಫಿ ಹೌಸ್​​ನ ಹಿರಿಯ ವ್ಯವಸ್ಥಾಪಕರಾಗಿರುವ ಆತ್ಮ ರಾಮ್​ ಶರ್ಮಾ ಈ ವಿಚಾರವಾಗಿ ಮಾತನಾಡಿದ್ದು, ನಾವು ಲಾಭ ಹಾಗೂ ನಷ್ಟರಹಿತ ರೀತಿಯಲ್ಲಿ ಕೆಫೆಯನ್ನ ನಡೆಸುತ್ತಿದ್ದೇವೆ. ನಮ್ಮ ಬಳಿ ಹಣವಿಲ್ಲ. ಕಳೆದೊಂದು ವರ್ಷಗಳಿಂದ ನಾವು ಸಿಬ್ಬಂದಿಗೆ ಸಂಬಳವನ್ನೇ ನೀಡಿಲ್ಲ. ನಾವು ಶೀಘ್ರದಲ್ಲೇ ಕಾಫಿ ಹೌಸ್​ ಬಂದ್​ ಮಾಡಲಿದ್ದೇವೆ ಎಂದು ಹೇಳಿದ ಬಳಿಕ ಅನೇಕರು ನಮ್ಮ ಬೆಂಬಲಕ್ಕೆ ಬಂದಿದ್ದಾರೆ. ಎಂದು ಹೇಳಿದ್ರು.

ಕೊರೊನಾ ಸಂಕಷ್ಟಕ್ಕೂ ಮುನ್ನ ಶಿಮ್ಲಾದ ಈ ಕಾಫಿ ಹೌಸ್​ ದಿನಕ್ಕೆ 60 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿತ್ತು. ಆದರೆ ಕೊರೊನಾದಿಂದಾಗಿ ಈಗ ದಿನಕ್ಕೆ 4 ಸಾವಿರ ರೂಪಾಯಿ ಸಂಪಾದನೆ ಸಿಕ್ಕಿದ್ರೆ ಹೆಚ್ಚು ಎಂಬಂತಾಗಿದೆ. ದಿನಕ್ಕೆ ಮೂರು ಗಂಟೆಗಳ ಕಾಲ ಮಾತ್ರ ಕೆಫೆ ತೆರೆಯಲು ಅವಕಾಶ ಇರೋದ್ರಿಂದ ಈ ಐಕಾನಿಕ್​ ಕಾಫಿ ಹೌಸ್​ ಭಾರೀ ನಷ್ಟವನ್ನ ಅನುಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...