alex Certify ಹಾಳಾದ ನೋಟುಗಳನ್ನು ಬದಲಿಸುವ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಳಾದ ನೋಟುಗಳನ್ನು ಬದಲಿಸುವ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಹರಿದ ಬಳಿಕ ಪುನಃ ಜೋಡಿಸಿರುವ, ಮಣ್ಣು ಮೆತ್ತುಕೊಂಡು ಮಾಸಿದ ಬಣ್ಣಕ್ಕೆ ತಿರುಗಿರುವ ವಿವಿಧ ಮುಖಬೆಲೆಯ ನೋಟುಗಳು ನಿಮ್ಮ ಬಳಿ ಇದ್ದಲ್ಲಿ, ಅವುಗಳನ್ನು ಸಮೀಪದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನೀಡಿ ವಿನಿಮಯ ಮಾಡಿಕೊಳ್ಳಲು ಆರ್‌.ಬಿ.ಐ. ಅವಕಾಶ ಕಲ್ಪಿಸಿದೆ.

ಆದರೆ , ನೀವು ನೀಡಿದ ನೋಟಿಗೆ ಸಮನಾದ ಬೆಲೆಯ ಹೊಸ ನೋಟು ಸಿಗುವುದು ಮಾತ್ರ ಖಾತ್ರಿ ಇಲ್ಲ..! ಹೌದು, ಆರ್‌.ಬಿ.ಐ.ನ 2018ರ ನಿಯಮದ ಪ್ರಕಾರ ನೋಟುಗಳ ಪರಿಸ್ಥಿತಿ ನಿರ್ಧರಿಸುವ ಬ್ಯಾಂಕಿನ ಅಧಿಕಾರಿಯು 50% ಅಥವಾ ಅದಕ್ಕೂ ಕಡಿಮೆ ಮುಖಬೆಲೆಯ ಹೊಸ ನೋಟನ್ನು ನಿಮಗೆ ನೀಡಬಹುದು. ಈ ನಿಯಮಕ್ಕೆ ನೋಟ್‌ ರೀಫಂಡ್‌ ರೂಲ್ಸ್‌ (ಎನ್‌ಆರ್‌ಆರ್‌) ಎಂದು ಹೆಸರು. 2009ರಲ್ಲಿ ಜಾರಿಗೆ ತರಲಾದ ಈ ನಿಯಮವನ್ನು 2018ರಲ್ಲಿ ತಿದ್ದುಪಡಿ ಮಾಡಲಾಗಿದೆ.

20 ರೂ. ಮುಖಬೆಲೆಯ ಹಾಳಾದ ನೋಟು ಬ್ಯಾಂಕ್‌ಗೆ ನೀಡಿದಲ್ಲಿ, ಯಾವುದೇ ರೀತಿಯ ಕಟ್‌ ಆಗಿರದೇ ಇದ್ದಲ್ಲಿ ಪೂರ್ಣ ಮೊತ್ತದ ಹೊಸ ನೋಟು ನೀಡಲು ಅವಕಾಶವಿದೆ. ಇಲ್ಲವೇ ಶೇ.50ರಷ್ಟು ಮೌಲ್ಯಕ್ಕಿಂತ ಹೆಚ್ಚು ಕೂಡ ಬ್ಯಾಂಕ್‌ ನೀಡಬಹುದಾಗಿದೆ.

ಗಾಯಕಿ ಹಾಡುತ್ತಿದ್ದಾಗಲೇ ನಡೆಯಿತು ಆ ಘಟನೆ….! ಹೃದಯಸ್ಪರ್ಶಿ ವಿಡಿಯೋ ಜಾಲತಾಣದಲ್ಲಿ ವೈರಲ್

ಅದೇ ರೀತಿ, ಅರ್ಧಕ್ಕಿಂತ ಕಡಿಮೆ ನೋಟಿನ ಭಾಗ ತುಂಡಾಗಿದ್ದರೆ, ಜತೆಗೆ ನೋಟಿನ ಅರ್ಧ ಭಾಗ ಕೂಡ ಸ್ಪಷ್ಟವಾಗಿ ಕಾಣಿಸದೇ ಇದ್ದಲ್ಲಿ ಬ್ಯಾಂಕ್‌ ಅಧಿಕಾರಿಯು ನೋಟನ್ನು ತಿರಸ್ಕರಿಸಬಹುದಾಗಿದೆ.

ಇನ್ನು, 50 ರೂ. ಮುಖಬೆಲೆಯ ನೋಟು ಬ್ಯಾಂಕ್‌ಗೆ ನೀಡಿದಲ್ಲಿ, ಸ್ಪಷ್ಟವಾಗಿ ಕಾಣುವ ನೋಟಿನ ಭಾಗ ಶೇ.40ಕ್ಕಿಂತ ಕಡಿಮೆ ಇದ್ದರೆ ನೋಟು ತಿರಸ್ಕೃತಗೊಳ್ಳಲಿದೆ. ಶೇ.80ರಷ್ಟು ನೋಟಿನ ಭಾಗ ಸ್ಪಷ್ಟವಾಗಿದ್ದರೆ ಆವಾಗ ಅರ್ಧ ಮೊತ್ತಕ್ಕೆ ಹೊಸ ನೋಟುಗಳನ್ನು ನೀಡಲಾಗುವುದು.
ಇನ್ನು 80% ಗಿಂತ ಹೆಚ್ಚು ನೋಟಿನ ಭಾಗ ಸ್ಪಷ್ಟವಾಗಿದ್ದು, ನೋಟು ಹರಿದು ಹೋಗದೇ ಇದ್ದಲ್ಲಿ ಪೂರ್ಣ ಮುಖಬೆಲೆಯ ಹೊಸ ನೋಟು ಸಿಗಲಿದೆ.

KYC ಹೆಸರಲ್ಲಿ ವಂಚನೆ…! ಗ್ರಾಹಕರಿಗೆ ಎಸ್.ಬಿ.ಐ. ನೀಡಿದೆ ಈ ಮಹತ್ವದ ಸೂಚನೆ

ಒಂದು ವೇಳೆ, ಹಿಂದಿರುಗಿಸಲಾರದ ಸ್ಥಿತಿಯಲ್ಲಿ (ಪೂರ್ಣವಾಗಿ ಹಾಳಾಗಿರುವ) ನೋಟು ಬ್ಯಾಂಕ್‌ಗೆ ನೀಡಲಾಗಿದ್ದರೆ ಅವರು ಅದನ್ನು ತಮ್ಮ ವಶಕ್ಕೆ ಪಡೆದು ಆರ್‌.ಬಿ.ಐ.ಗೆ ವರ್ಗಾಯಿಸುತ್ತಾರೆ. ಆರ್‌.ಬಿ.ಐ. ನೋಟನ್ನು ನಾಶಪಡಿಸುತ್ತದೆ. ಬಹಳ ಮುಖ್ಯವಾಗಿ ಈ ಹಾಳಾದ, ಮಣ್ಣು ಮೆತ್ತಿದ ನೋಟುಗಳ ಜಂಜಾಟಕ್ಕೆ ಸಿಲುಕುವವರು ಹೆಚ್ಚಾಗಿ ಸಣ್ಣ ಮಟ್ಟದಲ್ಲಿ ಹಣಕಾಸು ವ್ಯವಹಾರವನ್ನು ನಿತ್ಯ ಮಾಡುವ ವ್ಯಾಪಾರಿಗಳು(ಹೋಟೆಲ್‌, ತಳ್ಳುವ ಗಾಡಿಯ ವ್ಯಾಪಾರಿಗಳು ದಿನಸಿ ಅಂಗಡಿ). ಇಲ್ಲವೇ ಸಾರಿಗೆ ಸಂಸ್ಥೆಗಳು ಮಾಲೀಕರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...