ಡ್ರಗ್ಸ್ ಪ್ರಕರಣದ ಬಳಿಕ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ದಿನಕ್ಕೊಂದು ಆರೋಪಗಳನ್ನು ಹೊರಿಸುತ್ತಾ ಸುದ್ದಿಯಲ್ಲಿರುವ ಎನ್ಸಿಪಿ ನಾಯಕ್ ನವಾಬ್ ಮಲ್ಲಿಕ್ ವಿರುದ್ಧ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಮುಂಬೈನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ಭೂಗತ ಪಾತಕಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಶೀಘ್ರದಲ್ಲೇ ಈ ಆರೋಪದ ಸಂಬಂಧ ಸಾಕ್ಷ್ಯಗಳನ್ನೂ ಬಿಡುಗಡೆ ಮಾಡಲಿದ್ದೇನೆ ಎಂದು ಫಡ್ನವಿಸ್ ಹೇಳಿದ್ದಾರೆ
ಯಾರಿಗೆ ಭೂಗತ ಪಾತಕಿಗಳ ಜೊತೆ ಸಂಪರ್ಕ ಇದೆಯೋ ಅವರು ನನ್ನ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಭೂಗತ ಪಾತಕಿಗಳ ಜೊತೆಯಲ್ಲಿ ನವಾಬ್ ಮಲ್ಲಿಕ್ ಸಂಪರ್ಕ ಹೊಂದಿರುವ ಬಗ್ಗೆ ಶೀಘ್ರದಲ್ಲೇ ಸಾಕ್ಷ್ಯಗಳನ್ನು ಬಿಡುಗಡೆ ಮಾಡುತ್ತೇನೆ. ದೀಪಾವಳಿ ಹಬ್ಬ ಮುಗಿಯಲಿ ಎಂದು ಕಾಯುತ್ತಿದ್ದೇನೆ ಎಂದು ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಾರೆ.
ಡ್ರಗ್ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ಜೈದೀಪ್ ರಾಣಾ ದೇವೇಂದ್ರ ಫಡ್ನವಿಸ್ ಜೊತೆ ಹೊಂದಾಣಿಗೆ ಮಾಡಿಕೊಂಡಿದ್ದರು. ಅಲ್ಲದೇ ಎನ್ಸಿಬಿಗೆ ಸಮೀರ್ ವಾಂಖೆಡೆಯನ್ನು ವರ್ಗಾವಣೆ ಮಾಡಿದ್ದರ ಹಿಂದೆಯೂ ದೇವೇಂದ್ರ ಫಡ್ನವಿಸ್ ಕೈವಾಡ ಇತ್ತು ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದರು.