alex Certify ಪಿಎಫ್‌ ಖಾತೆದಾರರು ಡಿಸೆಂಬರ್‌ 31ರೊಳಗೆ ಮಾಡಲೇಬೇಕು ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಫ್‌ ಖಾತೆದಾರರು ಡಿಸೆಂಬರ್‌ 31ರೊಳಗೆ ಮಾಡಲೇಬೇಕು ಈ ಕೆಲಸ

ನೀವು ಭವಿಷ್ಯ ನಿಧಿ (ಪಿಎಫ್) ಖಾತೆದಾರರಾಗಿದ್ದಲ್ಲಿ ಈ ಮಾಹಿತಿ ನಿಮಗೆ ಬಹಳ ಮುಖ್ಯವಾಗಿದೆ.

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಎಲ್ಲಾ ಪಿಎಫ್ ಖಾತೆದಾರರಿಗೆ ಡಿಸೆಂಬರ್‌ 31ರ ಒಳಗೆ ನಾಮಿನಿ ನೇಮಿಸುವುದನ್ನು ಕಡ್ಡಾಯಗೊಳಿಸಿದೆ. ನಾಮಿನಿ ನೇಮಕ ಮಾಡದೇ ಇದ್ದಲ್ಲಿ ಅನೇಕ ಪ್ರಯೋಜನಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ವಿಮೆ ದುಡ್ಡು, ಪಿಂಚಣಿಯಂಥ ಪ್ರಯೋಜನಗಳಿಗೆ ನೀವು ಭಾಜನರಾಗುವುದಿಲ್ಲ.

ಆನ್ಲೈನ್ ಮೂಲಕವೇ ಪಿಎಫ್ ಖಾತೆದಾರರು ನಾಮಿನಿ ನೇಮಕ ಮಾಡಬಹುದಾಗಿದೆ. ತಮ್ಮ ಖಾತೆಗಳಿಗೆ ಹೆಚ್ಚುವರಿ ನಾಮಿನಿಗಳನ್ನು ನೇಮಿಸಲು ಇಪಿಎಫ್‌ಓನ ಪೋರ್ಟಲ್ ಅವಕಾಶ ಕೊಟ್ಟಿದೆ.

ಹೆಲಿಕಾಪ್ಟರ್‌ ದುರಂತದ ಅಂತಿಮ ಕ್ಷಣಗಳ ಸೆರೆಹಿಡಿದ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ

* ಇಪಿಎಫ್‌ಓ ಪೋರ್ಟಲ್‌ನ https://www.epfindia.gov.in/site ಲಿಂಕ್‌ಗೆ ಭೇಟಿ ನೀಡಿ.

* ಇದಾದ ಬಳಿಕ ‘Services’ ಅಡಿ ‘For Employees’ ಅನ್ನು ಡ್ರಾಪ್‌ಡೌನ್ ಮೆನುವಿನಲ್ಲಿ ಆಯ್ಕೆ ಮಾಡಿ.

* ಇದಾದ ಬಳಿಕ ‘Member UAN/Online Service (OCS/OTCP)’ ಆಯ್ಕೆ ಮಾಡಿ.
* ಆಮೇಲೆ ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು.

* ‘Manage’ ಪೇಜ್‌ನಲ್ಲಿ ನೀವು ‘E-Nomination’ ಆಯ್ಕೆ ನಿಮ್ಮ ಕಣ್ಣಿಗೆ ಬೀಳಲಿದೆ. ಅದನ್ನು ಒತ್ತಿ ಸಕ್ರಿಯಗೊಳಿಸಿ.

* ನಿಮ್ಮ ಕುಟುಂಬದ ಘೋಷಣೆ ಬದಲಿಸಲು ‘add family details’ ಅಥವಾ nominee details ಮೇಲೆ ‘yes’ ಎಂದು ಕ್ಲಿಕ್ ಮಾಡಿ. ಅಲ್ಲಿ ನೀವು ನಾಮಿನಿ ಕುರಿತು ಕೇಳಲ್ಪಟ್ಟ ವಿವರಗಳನ್ನು ಸಲ್ಲಿಸಿ.

* ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬೇಕಿದ್ದಲ್ಲಿ, ’Add New Button’ ಕ್ಲಿಕ್ ಮಾಡಿ, ಹೆಚ್ಚುವರಿ ನಾಮಿನಿಯ ಮಾಹಿತಿ ಸಲ್ಲಿಸಿ.

ನಿಮ್ಮ ಕುಟುಂಬದ ಮಾಹಿತಿ ಸೇವ್ ಮಾಡುತ್ತಲೇ ನಿಮ್ಮ ಇ-ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಡಿಸೆಂಬರ್‌ 31, 2021ರ ಒಳಗೆ ನಿಮ್ಮ ಪಿಎಫ್ ಖಾತೆಗೆ ನಿಮ್ಮ ನಾಮಿನಿಯನ್ನು ಸೇರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...